ADVERTISEMENT

ಇರಾನ್‌| ಚಬಹಾರ್ ಬಂದರು ಅಭಿವೃದ್ಧಿ ಚುರುಕುಗೊಳಿಸಿದ ಭಾರತ

ಮೇನಲ್ಲಿ ಕಾರ್ಯಾಚರಣೆ ನಿರೀಕ್ಷೆ: ಅಮೆರಿಕದ ಸಿಆರ್‌ಎಸ್‌ ವರದಿಯಲ್ಲಿ ಉಲ್ಲೇಖ

ಪಿಟಿಐ
Published 9 ಏಪ್ರಿಲ್ 2021, 9:03 IST
Last Updated 9 ಏಪ್ರಿಲ್ 2021, 9:03 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಕೆಲಕಾಲ ಸ್ಥಗಿತಗೊಳಿಸಲಾಗಿದ್ದ, ಇರಾನ್‌ನ ಚಬಹಾರ್‌ ಬಂದರು ಅಭಿವೃದ್ಧಿ ಕಾಮಗಾರಿಯನ್ನು ಭಾರತ ಚುರುಕುಗೊಳಿಸಿದೆ. ಮುಂದಿನ ತಿಂಗಳು ನಿರ್ಮಾಣ ಕಾರ್ಯ ಪೂರ್ಣಗೊಂಡು, ಬಂದರು ಬಳಕೆಗೆ ಮುಕ್ತವಾಗಲಿದೆ ಎಂದು ಅಮೆರಿಕದ ಸಂಸತ್‌ಗೆ ಸಲ್ಲಿಸಲಾದ ವರದಿಯಲ್ಲಿ ಹೇಳಲಾಗಿದೆ.

ಕಾಂಗ್ರೆಸನಲ್‌ ರೀಸರ್ಚ್‌ ಸರ್ವೀಸ್‌ (ಸಿಆರ್‌ಎಸ್‌) ಎಂಬ ಸ್ವತಂತ್ರ ಸಂಸ್ಥೆ ಈ ವರದಿಯನ್ನು ಸಲ್ಲಿಸಿದೆ.

ಪಾಕಿಸ್ತಾನದಿಂದ ಅಡೆತಡೆಯಿಲ್ಲದೇ ಅಫ್ಗಾನಿಸ್ತಾನದೊಂದಿಗೆ ವ್ಯಾಪಾರ ವಹಿವಾಟಿಗೆ ಅನುಕೂಲವಾಗುವ ಉದ್ದೇಶದಿಂದ, ಚಬಹಾರ್‌ ಬಂದರು ಹಾಗೂ ಅದಕ್ಕೆ ಪೂರಕವಾಗಿ ರೈಲು ಮಾರ್ಗದ ಅಭಿವೃದ್ಧಿಗೆ ನೆರವು ನೀಡುವುದಾಗಿ 2015ರಲ್ಲಿ ಭಾರತ ಒಪ್ಪಿಗೆ ನೀಡಿತ್ತು ಎಂದು ಸಿಆರ್‌ಎಸ್‌ ವರದಿಯಲ್ಲಿ ವಿವರಿಸಲಾಗಿದೆ.

ADVERTISEMENT

‘2021ರ ಆರಂಭದಲ್ಲಿ ಬಂದರು ಅಭಿವೃದ್ಧಿ ಕಾರ್ಯವನ್ನು ಚುರುಕುಗೊಳಿಸಲಾಗಿದೆ. ಇದೇ ವರ್ಷದ ಮೇ ತಿಂಗಳ ವೇಳೆಗೆ ಬಂದರು ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆ ಇದೆ‘ ಎಂದು ವರದಿ ತಿಳಿಸಿದೆ.

2016ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇರಾನ್‌ಗೆ ಭೇಟಿ ನೀಡಿದಾಗ ₹3,473 ಕೋಟಿ (500 ದಶಲಕ್ಷ ಡಾಲರ್‌) ವೆಚ್ಚದಲ್ಲಿ ಈ ಬಂದರು ಮತ್ತು ಇತರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯ ಒಪ್ಪಂದಕ್ಕೆ ಸಹಿ ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.