ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಹಾಗೂ ಭಾರತದ ಪ್ರಧಾನಿ ನರೇಂದ್ರ ಮೊದಿ (ಸಂಗ್ರಹ ಚಿತ್ರ)
ಕೃಪೆ: ಪಿಟಿಐ
ಮಾಲೆ: ದ್ವೀಪರಾಷ್ಟ್ರ ಮಾಲ್ದೀವ್ಸ್‌ನಲ್ಲಿ ಜಲ(ದೋಣಿ) ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲು 10 ಕೋಟಿ ಎಂವಿಆರ್ (ಸುಮಾರು ₹55 ಕೋಟಿ) ನೆರವಿನ 13 ಒಡಂಬಡಿಕೆಗಳಿಗೆ ಭಾರತ ಸಹಿ ಹಾಕಿದೆ. ಸಮುದ್ರ ಸಾರಿಗೆ ಸಂಪರ್ಕ ವಿಸ್ತರಣೆ ಮತ್ತು ಸಮುದಾಯದ ಜೀವನ ಸುಧಾರಣೆಗೆ ಇದು ಸಹಕಾರಿಯಾಗಲಿದೆ.
ಮಾಲ್ದೀವ್ಸ್ ವಿದೇಶಾಂಗ ಸಚಿವ ಅಬ್ದುಲ್ಲಾ ಖಲೀಲ್ ಮತ್ತು ಅಲ್ಲಿರುವ ಭಾರತದ ಹೈಕಮಿಷನರ್ ಜಿ.ಬಾಲಸುಬ್ರಮಣಿಯನ್, ಭಾರತ ಅನುದಾನದ 13 ಯೋಜನೆಗಳ ಒಪ್ಪಂದಕ್ಕೆ ಭಾನುವಾರ ಸಹಿ ಹಾಕಿದರು. ಎರಡೂ ದೇಶಗಳ ಸಂಬಂಧ ಗಟ್ಟಿಗೊಳಿಸುವಲ್ಲಿ ಈ ಒಪ್ಪಂದ ಮೈಲುಗಲ್ಲು ಎಂದು ಮಾಲ್ದೀವ್ಸ್ ವಿದೇಶಾಂಗ ಇಲಾಖೆ ಹೇಳಿತು. ‘ಮಾಲ್ದೀವ್ಸ್ ಜತೆ ಪಾಲುದಾರನಾಗಲು ಭಾರತ ಸರ್ಕಾರ ಸಂತೋಷಪಡುತ್ತದೆ’ ಎಂದು ಭಾರತದ ಹೈಕಮಿಷನರ್ ಕಚೇರಿ ‘ಎಕ್ಸ್’ ಪೋಸ್ಟ್‌ನಲ್ಲಿ ತಿಳಿಸಿದೆ.
ಮಾಲ್ದೀವ್ಸ್‌ನ ದ್ವೀಪಗಳ ನಡುವಿನ ಸಂಚಾರವನ್ನು ಚುರುಕುಗೊಳಿಸುವ ಜಲ ಸಾರಿಗೆ ಸಂಪರ್ಕ ಒದಗಿಸಲು 13 ಯೋಜನೆಗಳು ನೆರವಾಗಲಿವೆ ಎಂದು ಅಲ್ಲಿನ ಸಾರಿಗೆ ಸಚಿವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.