ADVERTISEMENT

ಸಪ್ತಕೋಸಿ ಅಣೆಕಟ್ಟು ಯೋಜನೆ ಅಧ್ಯಯನಕ್ಕೆ ಭಾರತ–ನೇಪಾಳ ನಿರ್ಧಾರ

ಪಿಟಿಐ
Published 24 ಸೆಪ್ಟೆಂಬರ್ 2022, 12:53 IST
Last Updated 24 ಸೆಪ್ಟೆಂಬರ್ 2022, 12:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಠ್ಮಂಡು: ಸಪ್ತ ಕೋಸಿ ಅಣೆಕಟ್ಟು ಯೋಜನೆ ಅನುಷ್ಠಾನ ಕುರಿತು ಹೆಚ್ಚಿನ ಅಧ್ಯಯನ ನಡೆಸಲು ಭಾರತ ಮತ್ತು ನೇಪಾಳ ನಿರ್ಧರಿಸಿವೆ. ಉಭಯ ದೇಶಗಳ ಹಿರಿಯ ಅಧಿಕಾರಿಗಳು ಸಭೆ ಇಲ್ಲಿ ನಡೆಯಿತು.

ಮಹಾಕಾಳಿ ಒಪ್ಪಂದದ ಅನುಷ್ಠಾನ ಮತ್ತು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಹಕಾರ ಒಳಗೊಂಡಂತೆ ದ್ವಿಪಕ್ಷೀಯ ಸಹಕಾರವನ್ನು ಪರಿಶೀಲಿಸಿದರು.ಸಪ್ತ ಕೋಸಿ ಅಣೆಕಟ್ಟು ನಿರ್ಮಾಣ ಕುರಿತು ಉಭಯ ದೇಶಗಳ ತಜ್ಞರ ತಂಡ ಶೀಘ್ರವೇ ಭೇಟಿಯಾಗಲಿದೆ ಎಂದು ಭಾರತ ರಾಯಭಾರ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ.

ಉದ್ದೇಶಿತ ಅಣೆಕಟ್ಟು ಅನ್ನು ನೇಪಾಳದ ಸಪ್ತಕೋಶಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿದ್ದು, ಆಗ್ನೇಯ ನೇಪಾಳ ಮತ್ತು ಉತ್ತರ ಬಿಹಾರದಲ್ಲಿ ಪ್ರವಾಹದ ತಡೆ ಜೊತೆಗೆ ಜಲವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.