ಡೊನಾಲ್ಡ್ ಟ್ರಂಪ್
– ಫೇಸ್‌ಬುಕ್ ಚಿತ್ರ
ವಾಷಿಂಗ್ಟನ್: ಶೇ 200ರಷ್ಟು ಸುಂಕ ಹೇರುವುದಾಗಿ ಹೇಳಿದ ಬಳಿಕ ಭಾರತ ಹಾಗೂ ಪಾಕಿಸ್ತಾನ ಯುದ್ಧ ನಿಂತಿತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಶ್ವೇತಭವನದ ಈ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.
‘ವ್ಯಾಪಾರವನ್ನು ಮುಂದಿಟ್ಟುಕೊಂಡು ನಾವು ಹಲವು ಯುದ್ಧವನ್ನು ನಿಲ್ಲಿಸಿದ್ದೇವೆ. ಉದಾಹರಣೆಗೆ ಭಾರತ ಹಾಗೂ ಪಾಕಿಸ್ತಾನ ನಡುವೆ ಪರಿಸ್ಥಿತಿ ಬಿಗಡಾಯಿಸುತ್ತಿತ್ತು. ಏಳು ವಿಮಾನಗಳನ್ನು ಹೊಡೆದು ಹಾಕಲಾಗಿತ್ತು. ಕೆಟ್ಟ ಸಂಗತಿಗಳು ನಡೆಯುತ್ತಿತ್ತು. ನಾನು ಅವರಿಬ್ಬರೊಂದಿಗೆ ವ್ಯಾಪಾರದ ವಿಷಯ ಮಾತನಾಡಿದೆ’ ಎಂದು ಟ್ರಂಪ್ ಹೇಳಿದ್ದಾರೆ.
‘ಅವರನ್ನು ಫೋನ್ ಮೂಲಕ ಸಂಪರ್ಕಿಸಿ, ಯುದ್ಧ ನಿಲ್ಲಿಸದೇ ಹೋದರೆ ವ್ಯಾಪಾರ ಒಪ್ಪಂದ ಮಾಡುವುದಿಲ್ಲ; ಅಮೆರಿಕಕ್ಕೆ ಮಾರಾಟ ಮಾಡುವ ಪ್ರತಿಯೊಂದು ವಸ್ತುವಿಗೂ ಶೇ 200ರಷ್ಟು ತೆರಿಗೆ ವಿಧಿಸುವುದಾಗಿ ಹೇಳಿದೆ’ ಎಂದು ಟ್ರಂಪ್ ಹೇಳಿದ್ದಾರೆ.
‘ಎರಡೂ ದೇಶಗಳ ನಾಯಕರೊಂದಿಗೆ ನಾನು ಮಾತನಾಡಿದೆ. ನಾನು ಇಬ್ಬರನ್ನೂ ಇಷ್ಟ ಪಡುತ್ತೇನೆ. ನಾನು ಹೇಳಿದ ಮರುದಿನವೇ ಯುದ್ಧದಿಂದ ಹಿಂದೆ ಸರಿಯುವುದಾಗಿ ತಿಳಿಸಿದರು. ಯುದ್ಧ ನಿಲ್ಲಿಸುವುದಾಗಿ ಹೇಳಿದರು. ಯುದ್ಧ ನಿಲ್ಲಿಸುವುದನ್ನು ನಾನು ಇಷ್ಟ ಪಡುತ್ತೇನೆ’ ಎಂದು ಹೇಳಿದ್ದಾರೆ.
(ಶ್ವೇತಭವನದ ಯೂಟ್ಯೂಬ್ ವಿಡಿಯೊ ಆಧರಿಸಿದ ಬರೆದ ಸುದ್ದಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.