ಜೆರುಸಲೆಂ: ಜೈವಿಕ ಯುದ್ಧ ನಡೆದ ಸಂದರ್ಭದಲ್ಲಿ ಇಸ್ರೇಲ್ ಭದ್ರತಾ ಪಡೆಗಳ ಸುರಕ್ಷತೆಗಾಗಿ ಅಭಿವೃದ್ಧಿಪಡಿಸಿದ್ದನೂತನ ಆ್ಯಂಟಿಸೆಪ್ಟಿಕ್ ಸೋಂಕುನಿವಾರಕವನ್ನು, ಕೋವಿಡ್–19 ವಿರುದ್ಧದ ಹೋರಾಟಕ್ಕೆ ಭಾರತ ಬಳಸಿಕೊಳ್ಳಲಿದೆ.
ಇಸ್ರೇಲ್ ಜೈವಿಕ ಸಂಶೋಧನಾ ಸಂಸ್ಥೆ(ಐಐಬಿಆರ್) ಈ ಸೋಂಕುನಿವಾರಕವನ್ನು ಅಭಿವೃದ್ಧಿಪಡಿಸಿದ್ದು, ಟೆರಾ ನೊವೆಲ್ ಎಂಬ ಇಸ್ರೇಲ್ ಮೂಲದ ಕಂಪನಿಯೇ ಇದರನ್ನು ಮಾರಾಟ ಮಾಡುತ್ತಿದೆ. ಕೊರೊನಾ ವೈರಸ್ ಸೇರಿದಂತೆ ಶೇ 100ರಷ್ಟು ಬ್ಯಾಕ್ಟೀರಿಯಾ, ವೈರಾಣುಗಳನ್ನು ನಾಶಪಡಿಸುವ ಸಾಮರ್ಥ್ಯ ಈ ದ್ರಾವಣಕ್ಕಿದ್ದು, ಇದರ ಪರಿಣಾಮ ಬಹುಕಾಲದವರೆಗೂ ಇರಲಿದೆ.
ಭಾರತದಲ್ಲಿರುವ ಏರ್ಪೋರ್ಟ್ಗಳು, ಆಸ್ಪತ್ರೆ, ಬಸ್ ನಿಲ್ದಾಣ, ಸಾರ್ವಜನಿಕ ಸಾರಿಗೆ ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಕೊರೊನಾ ಸೋಂಕು ಹರಡದಂತೆ ತಡೆಯಲು ಈ ದ್ರಾವಣವನ್ನು ಬಳಸಲು ನಿರ್ಧರಿಸಲಾಗಿದೆ ಎಂದು ಭಾನುವಾರ ಜೆರುಸಲೆಂ ಪೋಸ್ಟ್ ವರದಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.