
ಭಾರತ–ಅಮೆರಿಕ
ವಾಷಿಂಗ್ಟನ್: ಅಮೆರಿಕದಲ್ಲಿನ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಹಾಗೂ ಅಮೆರಿಕದ ಹಿರಿಯ ರಾಜತಾಂತ್ರಿಕ ಅಧಿಕಾರಿ ಪೌಲ್ ಕಪೂರ್ ಅವರು ಗುರುವಾರ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ಉಭಯ ದೇಶಗಳ ನಡುವಿನ ಸಮಾನ ಹಿತಾಸಕ್ತಿ, ದ್ವಿಪಕ್ಷೀಯ ಒಪ್ಪಂದ, ಪ್ರಾದೇಶಿಕ ಆದ್ಯತೆಗಳು ಸೇರಿದಂತೆ ಅಮೆರಿಕ– ಭಾರತದ ಸಂಬಂಧ ಬಲಪಡಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಕಪೂರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ರಷ್ಯಾದ ತೈಲ ಖರೀದಿ ಮತ್ತು ಸುಂಕ-ಸಂಬಂಧಿತ ವಿವಾದಗಳ ನಡುವೆಯೂ ಉಭಯ ದೇಶಗಳು ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಕುರಿತು ಚರ್ಚೆ ನಡೆಸಿವೆ.
ಮಾಹಿತಿ ತಂತ್ರಜ್ಞಾನ ಕಂಪನಿ ‘ಕೊಹಿಸಿಟಿ’ ಸಿಇಒ ಸಂಜಯ್ ಪೂನೆನ್ ಅವರೊಂದಿಗೆ ಕ್ವಾತ್ರಾ ಅವರು ಸಾಫ್ಟವೇರ್ ಭದ್ರತೆಯಲ್ಲಿ ಭಾರತ ಮತ್ತು ಅಮೆರಿಕ ನಡುವೆ ಸಹಕಾರ ಹಾಗೂ ಉಭಯ ದೇಶಗಳ ಕೈಗಾರಿಕೆಗಳಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯ ಕುರಿತು ಗುರುವಾರ ಚರ್ಚೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.