ADVERTISEMENT

ಭಾರತದೊಂದಿಗೆ ವ್ಯಾಪಾರ ಒಪ್ಪಂದ ಅಂತಿಮಗೊಂಡಿಲ್ಲ: ಡೊನಾಲ್ಡ್‌ ಟ್ರಂಪ್‌

ಪಿಟಿಐ
Published 30 ಜುಲೈ 2025, 5:02 IST
Last Updated 30 ಜುಲೈ 2025, 5:02 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌</p></div>

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

   

ಪಿಟಿಐ ಚಿತ್ರ

ನ್ಯೂಯಾರ್ಕ್: ಭಾರತ ಹಲವು ದೇಶಗಳಿಗೆ ಹೆಚ್ಚಿನ ಸುಂಕ ವಿಧಿಸುತ್ತಿದೆ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದೊಂದಿಗೆ ವ್ಯಾಪಾರ ಒಪ್ಪಂದವನ್ನು ಇನ್ನು ಅಂತಿಮಗೊಳಿಸಲಾಗಿಲ್ಲ ಎಂದು ಹೇಳಿದ್ದಾರೆ.

ADVERTISEMENT

ಸ್ಕಾಟ್ಲೆಂಡ್‌ನಿಂದ ವಾಷಿಂಗ್ಟನ್‌ಗೆ ಹಿಂದಿರುಗುವಾಗ ಮಂಗಳವಾರ ಏರ್ ಫೋರ್ಸ್ ಒನ್‌ನಲ್ಲಿ ವರದಿಗಾರರೊಂದಿಗೆ ಮಾತನಾಡಿದರು, ಭಾರತವು ಅಮೆರಿಕ ವಿಧಿಸುವ ಶೇ 20-25 ಹೆಚ್ಚಿನ ಸುಂಕ ಎದುರಿಸಲು ಸಿದ್ಧತೆ ನಡೆಸುತ್ತಿದೆ ಎಂಬ ವರದಿಗಳ ಬಗ್ಗೆ ಕೇಳಿದಾಗ ‘ನಾನು ಹಾಗೆ ಭಾವಿಸುತ್ತೇನೆ’ ಎಂದು ಉತ್ತರಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ಉತ್ತಮ ಸ್ನೇಹಿತ ಎಂದು ಬಣ್ಣಸಿದ ಟ್ರಂಪ್‌, ‘ನಿಮಗೆಲ್ಲ ಗೊತ್ತಿದೆ, ನನ್ನ ಕೋರಿಕೆಯ ಮೇರೆಗೆ ಭಾರತ ಯುದ್ಧವನ್ನು ಕೊನೆಗೊಳಿಸಿದೆ. ಪಾಕಿಸ್ತಾನವೂ ಕೂಡ ಯುದ್ಧ ಕೊನೆಗೊಳಿಸಲು ಒಪ್ಪಿಗೆ ನೀಡಿದೆ. ನಾವು ಬಹಳಷ್ಟು ಉತ್ತಮ ಒಪ್ಪಂದವನ್ನು  ಮಾಡಿದ್ದೇವೆ, ಅದರಲ್ಲಿ ಇತ್ತೀಚೆಗೆ ಥೈಲ್ಯಾಂಡ್– ಕಾಂಬೋಡಿಯಾದ ಕದನ ವಿರಾಮ ಒಪ್ಪಂದ ಕೂಡ ಸೇರಿದೆ’ ಎಂದರು. 

ಭಾರತದೊಂದಿಗಿನ ಒಪ್ಪಂದದಿಂದ ಏನನ್ನು ನಿರೀಕ್ಷಿಸುತ್ತಿದ್ದೀರಾ ಎಂಬ ಪ್ರಶ್ನೆಗೆ, ‘ಮುಂದೆ ನೋಡುತ್ತೇವೆ. ಭಾರತ ಉತ್ತಮ ಸ್ನೇಹಿತ. ಆದರೆ ಭಾರತವು ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಯಾವುದೇ ದೇಶಕ್ಕಿಂತ ಹೆಚ್ಚಿನ ಸುಂಕಗಳನ್ನು ವಿಧಿಸಿದೆ. ಆದರೆ ಈಗ ನಾನು ಉಸ್ತುವಾರಿ ವಹಿಸಿದ್ದೇನೆ, ಇನ್ನು ಅದು ಸಾಧ್ಯವಿಲ್ಲ. ವ್ಯಾಪಾರ ಒಪ್ಪಂದಗಳು ಚೆನ್ನಾಗಿ ನಡೆಯುತ್ತಿವೆ’ ಎಂದು ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.