ADVERTISEMENT

ಮುಂದಿನ ವರ್ಷ ಆಗಸ್ಟ್‌ ಅವಧಿಗೆ ಭಾರತಕ್ಕೆ ಅಧ್ಯಕ್ಷ ಸ್ಥಾನ

ಪಿಟಿಐ
Published 19 ಜೂನ್ 2020, 6:07 IST
Last Updated 19 ಜೂನ್ 2020, 6:07 IST
ವಿಶ್ವಸಂಸ್ಥೆಯ ಭದ್ರತಾ ಮಂಡಳಿ
ವಿಶ್ವಸಂಸ್ಥೆಯ ಭದ್ರತಾ ಮಂಡಳಿ   

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಶಾಶ್ವತವಲ್ಲದ ಸದಸ್ಯ ದೇಶವಾಗಿ ಆಯ್ಕೆಯಾಗಿರುವ ಭಾರತಕ್ಕೆ ಮುಂದಿನ ವರ್ಷದ ಆಗಸ್ಟ್‌ ಅವಧಿಗೆ ಮಂಡಳಿಯ ಅಧ್ಯಕ್ಷ ಸ್ಥಾನ ಸಿಗಲಿದೆ.

15 ರಾಷ್ಟ್ರಗಳು ಮಂಡಳಿಯ ಸದಸ್ಯತ್ವ ಹೊಂದಿವೆ. ಇಂಗ್ಲಿಷ್‌ ವರ್ಣಮಾಲೆಯಂತೆ ಹೆಸರಿನ ಪ್ರಕಾರ ಆಯಾ ದೇಶಗಳಿಗೆ ಮಂಡಳಿಯ ಅಧ್ಯಕ್ಷ ಸ್ಥಾನದಲ್ಲಿ ಒಂದು ತಿಂಗಳ ಅವಧಿಗೆ ಕಾರ್ಯನಿರ್ವಹಿಸುವ ಅವಕಾಶ ನೀಡಲಾಗುತ್ತದೆ. ಈ ಸರದಿಯಂತೆ ಭಾರತಕ್ಕೆ ಈ ಅವಕಾಶ ಮುಂದಿನ ವರ್ಷದ ಆಗಸ್ಟ್‌ಗೆ ಸಿಗಲಿದೆ ಎಂದು ವಿಶ್ವಸಂಸ್ಥೆಯ ವಕ್ತಾರರ ಕಚೇರಿ ಪ್ರಕಟಣೆ ತಿಳಿಸಿದೆ.

ಬುಧವಾರ (ಜೂನ್‌17) ನಡೆದ ಚುನಾವಣೆಯಲ್ಲಿ ಭಾರತ, ನಾರ್ವೆ, ಐರ್ಲೆಂಡ್‌, ಮೆಕ್ಸಿಕೊ ಮತ್ತು ಕೀನ್ಯಾ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯ ರಾಷ್ಡ್ರಗಳಾಗಿ ಆಯ್ಕೆಯಾದವು. ಈ ವರ್ಷದ ಜನವರಿಯಿಂದ ಅನ್ವಯವಾಗುವಂತೆ ಈ ಸದಸ್ಯತ್ವದ ಅವಧಿ ಎರಡು ವರ್ಷ ಇರಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.