ADVERTISEMENT

ಪ್ಯಾರಿಸ್ AI ಶೃಂಗ: ಸಹಾಧ್ಯಕ್ಷತೆ ವಹಿಸಲಿರುವ ಭಾರತ ಎಂದ ಫ್ರಾನ್ಸ್

ಏಜೆನ್ಸೀಸ್
Published 15 ಜನವರಿ 2025, 11:47 IST
Last Updated 15 ಜನವರಿ 2025, 11:47 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ರಾಯಿಟರ್ಸ್

ಪ್ಯಾರಿಸ್: ಕೃತಕ ಬುದ್ಧಿಮತ್ತೆ (AI) ಕುರಿತು ಇದೇ ಫೆಬ್ರುವರಿಯಲ್ಲಿ ಫ್ರಾನ್ಸ್ ಆಯೋಜಿಸುತ್ತಿರುವ ಪ್ಯಾರಿಸ್ AI ಶೃಂಗದಲ್ಲಿ ಭಾರತವು ಸಹಾಧ್ಯಕ್ಷತೆ ವಹಿಸಲಿದೆ ಎಂದು ಸಚಿವೆ ಕಾರ್ಲಾ ಚಪಾಜ್‌ ಬುಧವಾರ ತಿಳಿಸಿದ್ದಾರೆ.

ADVERTISEMENT

ಫ್ರಾನ್ಸ್ ಸರ್ಕಾರದ ಸಂಪುಟ ಸಭೆಯ ನಂತರ ಅವರು ಈ ಮಾಹಿತಿ ಹಂಚಿಕೊಂಡಿದ್ದಾರೆ.

‘ಕೃತಕ ಬುದ್ಧಿಮತ್ತೆಯ ಮೇಲೆ ನಿಯಂತ್ರಣಕ್ಕಾಗಿ ಶೃಂಗ’ದಲ್ಲಿ ಪಾಲ್ಗೊಳ್ಳುವಂತೆ ಜಗತ್ತಿನ ವಿವಿಧ ರಾಷ್ಟ್ರಗಳ ಸರ್ಕಾರಿ ಅಧಿಕಾರಿಗಳನ್ನು ಆಹ್ವಾನಿಸಲಾಗುತ್ತಿದೆ. ಇವರೊಂದಿಗೆ ಸಂಶೋಧನೆ ಮತ್ತು ವ್ಯಾವಹಾರಿಕ ಜಗತ್ತಿನ ಪ್ರತಿನಿಧಿಗಳು ಹಾಗೂ ನಾಗರಿಕ ಸಮಾಜದ ಪ್ರತಿನಿಧಿಗಳನ್ನೂ ಆಹ್ವಾನಿಸಲಾಗುತ್ತಿದೆ’ ಎಂದಿದ್ದಾರೆ.

ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗುತ್ತಿದೆ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.