ADVERTISEMENT

ವಂಚನೆ ಪ್ರಕರಣ: ಭಾರತೀಯ ಅಮೆರಿಕನ್‌ ಬಂಧನ

​ಪ್ರಜಾವಾಣಿ ವಾರ್ತೆ
Published 20 ಜನವರಿ 2023, 11:33 IST
Last Updated 20 ಜನವರಿ 2023, 11:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನ್ಯೂಯಾರ್ಕ್‌ : ರಿಯಲ್‌ ಎಸ್ಟೇಟ್‌ ಮೇಲೆ ಹೂಡಿಕೆ ಮಾಡುವುದಾಗಿ ಹೇಳಿ ಭಾರತೀಯ ಸಮುದಾಯದ ಕೆಲವರನ್ನು ವಂಚಿಸಿದ್ದ ಆರೋಪದ ಮೇಲೆ ಭಾರತೀಯ ಅಮೆರಿಕನ್‌ ವ್ಯಕ್ತಿಯನ್ನು ಅಮೆರಿಕದ ಉತ್ತರ ಕರೊಲಿನಾದಲ್ಲಿ ಮಂಗಳವಾರ ಬಂಧಿಸಲಾಗಿದೆ.

ಕ್ಯಾರಿ ನಿವಾಸಿ ಕುಮಾರ್‌ ಅರುಣ್‌ ನೆಪ್ಪಳ್ಳಿ (56) ಬಂಧಿತ ವ್ಯಕ್ತಿ. ಅವರ ವಿರುದ್ಧ 23 ಅಂಶಗಳ ಆರೋಪ ಹೊರಿಸಲಾಗಿದೆ. ಉತ್ತರ ಕರೊಲಿನಾದ ಭಾರತೀಯ ಸಮುದಾಯವನ್ನು ಗುರಿಯಾಗಿಸಿಕೊಂಡು ಅವರು ಸುಮಾರು 12 ಜನರನ್ನು ವಂಚಿಸಿದ್ದಾರೆ. ಈ ಸಮುದಾಯದ ಜೊತೆಗೆ ಹೊಂದಿದ್ದ ಉತ್ತಮ ಹೆಸರನ್ನೇ ಅವರು ವಂಚನೆಗೆ ಬಳಸಿಕೊಂಡಿದ್ದಾರೆ ಎಂದು ಅಲ್ಲಿಯ ಯುಎಸ್‌ ಅಟಾರ್ನಿ ಕಚೇರಿಯು ತಿಳಿಸಿದೆ.

ನ್ಯಾಯಬದ್ಧವಾಗಿ ನಡೆಯುತ್ತಿರುವ ರಿಯಲ್‌ ಎಸ್ಟೇಟ್‌ ಉದ್ಯಮವೊಂದರಲ್ಲಿ ಅವರ ಹಣ ಹೂಡುವುದಾಗಿ ಮತ್ತು ಅದರಿಂದ ಅವರಿಗೆ ಲಾಭ ದೊರಕಿಸಿಕೊಡುವುದಾಗಿ ನಂಬಿಸಿದ್ದಾರೆ. ತಕ್ಷಣ ಹಣ ನೀಡಿದರೆ ಹೂಡಿಕೆಯ ಬಹುಪಾಲು ಮತ್ತು ಲಾಭವನ್ನು ಕೆಲವೇ ತಿಂಗಳಲ್ಲಿ ಹಿಂದಿರುಗಿಸುವುದಾಗಿ ಹೇಳಿ ಅವರನ್ನು ವಂಚಿಸಿದ್ದಾರೆ ಎಂದು ಅಲ್ಲಿಯ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಅವರ ವಿರುದ್ಧದ ಆರೋಪ ಸಾಬೀತಾದರೆ ಅವರಿಗೆ 20 ವರ್ಷಗಳ ಸಜೆ ಆಗಬಹುದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.