ADVERTISEMENT

ಗುಣಮಟ್ಟದ ಹಾಗೂ ಕೈಗೆಟಕುವ ಆರೋಗ್ಯ ಸೇವೆಗಾಗಿ ಭಾರತೀಯ ಅಮೆರಿಕನ್‌ ಅಮಿ ಬೆರಾಗೆ ಪ್ರಶಸ್ತಿ

ಚಾಂಪಿಯನ್ ಆಫ್ ಹೆಲ್ತ್‌ಕೇರ್ ಇನ್ನೊವೇಷನ್ ಪ್ರಶಸ್ತಿ

ಪಿಟಿಐ
Published 18 ಜುಲೈ 2023, 14:00 IST
Last Updated 18 ಜುಲೈ 2023, 14:00 IST
ಅಮಿ ಬೆರಾ
ಅಮಿ ಬೆರಾ   

ವಾಷಿಂಗ್ಟನ್: ಗುಣಮಟ್ಟದ ಹಾಗೂ ಕೈಗೆಟಕುವ ಆರೋಗ್ಯ ಸೇವೆ ನೀಡಿರುವುದನ್ನು ಪರಿಗಣಿಸಿ ಭಾರತೀಯ– ಅಮೆರಿಕನ್ ವೈದ್ಯ ಹಾಗೂ ರಾಜಕಾರಣಿ ಡಾ. ಅಮಿ ಬೆರಾ ಅವರಿಗೆ ಅಮೆರಿಕದ ಚಾಂಪಿಯನ್ ಆಫ್ ಹೆಲ್ತ್‌ಕೇರ್ ಇನ್ನೊವೇಷನ್ ಪ್ರಶಸ್ತಿ ಲಭಿಸಿದೆ. 

ಕಳೆದ ವಾರ ಇಲ್ಲಿ ನಡೆದ ಹೆಲ್ತ್‌ಕೇರ್ ಲೀಡರ್‌ಶಿಪ್ ಕೌನ್ಸಿಲ್‌ನ ಇನ್ನೊವೇಷನ್ ಎಕ್ಸ್‌ಪೋದಲ್ಲಿ ಡಾ. ಅಮಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 

‘ಈ ಪ್ರಶಸ್ತಿಯನ್ನು ಪಡೆದದ್ದಕ್ಕೆ ಹೆಮ್ಮೆಯುಂಟಾಗಿದೆ. ಅಮೆರಿಕದ ಪ್ರತಿ ಪ್ರಜೆಗೂ ಉನ್ನತ ಗುಣಮಟ್ಟದ ಹಾಗೂ ಕೈಗೆಟಕುವ ಆರೋಗ್ಯ ಸೇವೆ ನೀಡುವ ನನ್ನ ಕಾರ್ಯವನ್ನು ಬದ್ಧತೆಯಿಂದ ನಿರ್ವಹಿಸುವೆ’ ಎಂದು ಡಾ. ಅಮಿ ಟ್ವೀಟ್ ಮಾಡಿದ್ದಾರೆ. 

ADVERTISEMENT

ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಅಮಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.  ಗುಣಮಟ್ಟದ ಹಾಗೂ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ಅವರು ವಿಶೇಷ ಆಸಕ್ತಿ ವಹಿಸಿ ಕೆಲಸ ಮಾಡಿದ್ದಾರೆ. 

2013ರಲ್ಲಿ ರಾಜಕಾರಣವನ್ನು ಪ್ರವೇಶಿಸುವ ಮುನ್ನ ಡಾ. ಅಮಿ ಅವರು ಕ್ಯಾಲಿಫೋನಿರ್ಯಾದ  ಸ್ಯಾಕ್ರಮೆಂಟೊ ಕೌಂಟಿಯ ಮುಖ್ಯ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದರು. ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಅವರು ಸ್ಯಾಕ್ರಮೆಂಟೊ ಕೌಂಟಿಯನ್ನು ಪ್ರತಿನಿಧಿಸಿದ್ದರು. 

ಡಾ. ಅಮಿ ಅವರು ಪ್ರಸ್ತುತ ವಿದೇಶಾಂಗ ವ್ಯವಹಾರಗಳ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹೆಲ್ತ್‌ಕೇರ್ ಲೀಡರ್‌ಶಿಪ್ ಕೌನ್ಸಿಲ್ ಅಮೆರಿಕದ ವಿಶೇಷ ವೇದಿಕೆಯಾಗಿದೆ. ಆರೋಗ್ಯ ಸೇವೆಗೆ ಸಂಬಂಧಿಸಿದಂತೆ ನೀತಿ, ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಈ ವೇದಿಕೆಯು ಅಭಿವೃದ್ಧಿಪಡಿಸುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.