ವಾಷಿಂಗ್ಟನ್: ಭಾರತ ಮೂಲದ ಉದ್ಯಮಿ ರಮೇಶ್ ಭೂಟಡ ಅವರು ಫ್ಲಾರಿಡಾದಲ್ಲಿರುವ ಅಮೆರಿಕದ ಹಿಂದೂ ವಿಶ್ವವಿದ್ಯಾಲಯಕ್ಕೆ 1 ಮಿಲಿಯನ್ ಡಾಲರ್ (ಸುಮಾರು ₹ 8.2 ಕೋಟಿ) ನೆರವು ನೀಡಿದ್ದಾರೆ.
ಹಿಂದೂ ತತ್ವ, ಸಿದ್ಧಾಂತ ಆಧರಿಸಿದ ಶಿಕ್ಷಣವನ್ನು ಈ ವಿಶ್ವವಿದ್ಯಾಲಯ ನೀಡುತ್ತಿದೆ. 1989ರಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯಾಗಿದ್ದು, ಇದು ಈವರೆಗೆ ಪಡೆದಿರುವ ಅತ್ಯಧಿಕ ಮೊತ್ತದ ನೆರವಾಗಿದೆ.
ಭೂಟಡ ಅವರು ಹ್ಯೂಸ್ಟನ್ ಮೂಲದ ಸ್ಟಾರ್ ಪೈಪ್ ಉತ್ಪನ್ನಗಳ ಸಂಸ್ಥೆಯ ಸಿಇಒ. ‘ಯುವಜನರು ಸಂತಸ ಮತ್ತು ಪರಿಪೂರ್ಣ ಬದುಕು ಸಾಗಿಸಲು ಹಿಂದುತ್ವವನ್ನು ಅರಿತುಕೊಳ್ಳಲು ನೆರವಾಗುವುದು ಈ ದೇಣಿಗೆಯ ಉದ್ದೇಶವಾಗಿದೆ ಎಂದು ಅವರು ಪ್ರತಿಕ್ರಿಯಿಸಿದರು. ವಿಶ್ವವಿದ್ಯಾಲಯದ ಪರವಾಗಿ ಭೂಟಡ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.