ADVERTISEMENT

ಆರ್‌ಎನ್‌ಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ:ಹರ್ಮೀತ್ ಧಿಲ್ಲೋನ್‌ ಪರಾಭವ

ಪಿಟಿಐ
Published 28 ಜನವರಿ 2023, 14:25 IST
Last Updated 28 ಜನವರಿ 2023, 14:25 IST
ಹರ್ಮೀತ್‌ ಧಿಲ್ಲೋನ್‌
ಹರ್ಮೀತ್‌ ಧಿಲ್ಲೋನ್‌   

ವಾಷಿಂಗ್ಟನ್‌: ರಿಪಬ್ಲಿಕನ್‌ ಪಕ್ಷದ ರಾಷ್ಟ್ರೀಯ ಸಮಿತಿ (ಆರ್‌ಎನ್‌ಸಿ) ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಭಾರತ ಮೂಲದ ಸಂಸದೆ, 54 ವರ್ಷದ ಹರ್ಮೀತ್‌ ಧಿಲ್ಲೋನ್‌ ಪರಾಭವಗೊಂಡಿದ್ದಾರೆ.

ತೀವ್ರ ಸ್ಪರ್ಧೆ ಕಂಡ ಚುನಾವಣೆಯಲ್ಲಿ 49 ವರ್ಷದ ರೊನ್ನಾ ಮೆಕ್‌ಡೇನಿಯಲ್‌ ಮರು ಆಯ್ಕೆಗೊಂಡರು. ಇದರೊಂದಿಗೆ ಈ ಸ್ಥಾನಕ್ಕೆ ಅವರು ನಾಲ್ಕನೇ ಬಾರಿ ಆಯ್ಕೆಯಾದಂತಾಗಿದೆ.

ಗೌಪ್ಯ ಮತದಾನ ನಡೆದಿದ್ದು, ಮೆಕ್‌ ಡೇನಿಯಲ್ 111 ಮತ ಪಡೆದರೆ, ಧಿಲ್ಲೋನ್‌ ಅವರು 51 ಮತ ಪಡೆಯಲಷ್ಟೇ ಶಕ್ತರಾದರು. ಇನ್ನೊಬ್ಬ ಸ್ಪರ್ಧಿ ಮೈಕ್‌ ಲಿಂಡೆಲ್ ನಾಲ್ಕು ಮತ ಪಡೆದರು.

ADVERTISEMENT

ಆರ್‌ಎನ್‌ಸಿಯು ಡೊನಾಲ್ಡ್ ಟ್ರಂಪ್‌ ನೇತೃತ್ವದ ರಿಪಬ್ಲಿಕನ್‌ ಪಕ್ಷದ ಉನ್ನಾಧಿಕಾರ ಆಡಳಿತ ಸಮಿತಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.