ADVERTISEMENT

ಅಮೆರಿಕದ ರಕ್ಷಣಾ ಇಲಾಖೆಗೆ ಕ್ಯಾಶ್ ಪಟೇಲ್ ನೇಮಕ

ರಕ್ಷಣಾ ಇಲಾಖೆಯ ಕಾರ್ಯದರ್ಶಿಯ ಸಿಬ್ಬಂದಿಯ ಮುಖ್ಯಸ್ಥರ ಹುದ್ದೆಗೆ ಭಾರತೀಯ–ಅಮೆರಿಕನ್

ಪಿಟಿಐ
Published 11 ನವೆಂಬರ್ 2020, 8:03 IST
Last Updated 11 ನವೆಂಬರ್ 2020, 8:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್‌: ಭಾರತೀಯ ಅಮೆರಿಕನ್‌ ಕ್ಯಾಶ್ ಪಟೇಲ್ ಅವರನ್ನು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಕ್ರಿಸ್‌ ಮಿಲ್ಲರ್‌ ಅವರ ಸಿಬ್ಬಂದಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿರುವುದಾಗಿ ಅಮೆರಿಕ ಸರ್ಕಾರ ತಿಳಿಸಿದೆ.

ಇತ್ತೀಚೆಗಷ್ಟೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ರಕ್ಷಣಾ ಕಾರ್ಯದರ್ಶಿ ಮಾರ್ಕ್‌ಎಸ್ಪೆರ್ ಅವರನ್ನು ವಜಾಮಾಡಿ, ಆ ಜಾಗಕ್ಕೆ ರಾಷ್ಟ್ರೀಯ ಭಯೋತ್ಪಾದಕ ನಿಗ್ರಹ ಕೇಂದ್ರದ ನಿರ್ದೇಶಕರಾಗಿದ್ದ ಕ್ರಿಸ್‌ ಮಿಲ್ಲರ್ ಅವರನ್ನು ನೇಮಿಸಿದ ನಂತರ, ಪೆಂಟಗನ್‌ ಕಚೇರಿಯಿಂದ ಈ ಹೊಸ ನೇಮಕಾತಿ ವಿಚಾರ ಹೊರಬಿದ್ದಿದೆ.

ಮಿಲ್ಲರ್ ಅವರು ಸೋಮವಾರದಿಂದ ರಕ್ಷಣಾ ಇಲಾಖೆಯ ಎಲ್ಲ ಕಾರ್ಯಚಟವಟಿಕೆ ಮತ್ತು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಮಂಗಳವಾರ ಪೆಂಟಗನ್ ಭವನದ ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಸ್ತುತ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿದ್ದ ಕ್ಯಾಶ್ ಪಟೇಲ್ ಅವರನ್ನು ಮಿಲ್ಲರ್‌ ಅವರು ತಮ್ಮ ಸಿಬ್ಬಂದಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದಾರೆ‘ ಎಂದು ಪ್ರಕಟಣೆ ತಿಳಿಸಿದೆ. ಜೆನ್‌ ಸ್ಟ್ರೀವರ್ಟ್‌ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಕ್ಯಾಶ್ ಪಟೇಲ್ ನೇಮಕವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.