ADVERTISEMENT

ವೈದ್ಯಕೀಯ ಹಗರಣ: ಅಮೆರಿಕದಲ್ಲಿ ಭಾರತೀಯನಿಗೆ 20 ವರ್ಷ ಸಜೆ

ಪಿಟಿಐ
Published 30 ಮೇ 2021, 10:18 IST
Last Updated 30 ಮೇ 2021, 10:18 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹ್ಯೂಸ್ಟನ್‌: ವೈದ್ಯಕೀಯ ಹಗರಣದಲ್ಲಿಭಾಗಿಯಾದ ಆರೋಪದ ಮೇರೆಗೆ ಭಾರತೀಯ ಮೂಲದ ಅಮೆರಿಕದ ವೃತ್ತಿಪರ ಶುಶ್ರೂಷಕನಿಗೆ (ನರ್ಸ್‌ ಪ್ರಾಕ್ಟಿಷನರ್‌) ಅಮೆರಿಕದ ನ್ಯಾಯಾಲಯವು 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಹಾಗೂ ವಂಚನೆಯ 52 ದಶಲಕ್ಷ ಡಾಲರ್‌ ಅನ್ನು ದಂಡ ರೂಪದಲ್ಲಿ ನೀಡಲು ಸೂಚಿಸಿದೆ.

ತ್ರಿವಿಕ್ರಮ ರೆಡ್ಡಿ (39)ಎಂಬಾತನ ವಿರುದ್ಧ ವೈದ್ಯಕೀಯ ಮತ್ತು ಖಾಸಗಿ ವಿಮೆ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಿತ್ತು. ಇದೀಗ ಈ ಆರೋಪಗಳು ಸಾಬೀತಾಗಿದ್ದು, ಮೇ 25ರಂದು ನ್ಯಾಯಾಲಯವು ಈ ಶಿಕ್ಷೆ ವಿಧಿಸಿದೆ’ ಎಂದು ಉತ್ತರ ಟೆಕ್ಸಾಸ್‌ನ ಜಿಲ್ಲಾ ನ್ಯಾಯಾಲಯದ ಹಂಗಾಮಿ ಅಟಾರ್ನಿ ಪ್ರೇರಕ್‌ ಷಾ ತಿಳಿಸಿದರು.

‘ಮೆಡಿಕೇರ್‌, ಬ್ಲೂ ಕ್ರಾಸ್‌ ಬ್ಲೂ ಶೀಲ್ಡ್‌ ಆಫ್‌ ಟೆಕ್ಸಾಸ್‌, ಏಟ್ನಾ, ಯುನೈಟೆಡ್ ಹೆಲ್ತ್‌ಕೇರ್, ಹುಮಾನಾ ಮತ್ತು ಸಿಗ್ನಾವನ್ನು ವಂಚಿಸಲು ತ್ರಿವಿಕ್ರಮ ರೆಡ್ಡಿ ಯೋಜನೆ ರೂಪಿಸಿದ್ದ’ ಎಂದು ನ್ಯಾಯಾಲಯದ ದಾಖಲೆಗಳು ಹೇಳಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.