ADVERTISEMENT

ಕೊರಿಯರ್‌ ದೈತ್ಯ ಫೆಡೆಕ್ಸ್‌ಗೆ ಭಾರತ ಮೂಲದ ಸುಬ್ರಮಣಿಯಂ ನೂತನ ಸಿಇಒ

ಪಿಟಿಐ
Published 29 ಮಾರ್ಚ್ 2022, 13:19 IST
Last Updated 29 ಮಾರ್ಚ್ 2022, 13:19 IST
ರಾಜ್‌ ಸುಬ್ರಮಣಿಯಂ
ರಾಜ್‌ ಸುಬ್ರಮಣಿಯಂ   

ವಾಷಿಂಗ್ಟನ್‌: ಬಹುರಾಷ್ಟ್ರೀಯ ಕೊರಿಯರ್‌ ದೈತ್ಯ ಕಂಪನಿ ಫೆಡೆಕ್ಸ್‌ನ ಹೊಸ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಇಒ) ಭಾರತ ಮೂಲದ ಅಮೆರಿಕನ್‌ ರಾಜ್‌ ಸುಬ್ರಮಣಿಯಂ ಶೀಘ್ರವೇ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಸಂಸ್ಥೆ ಘೋಷಿಸಿದೆ.

ಈಗ ಕಂಪನಿಯ ಸಿಇಒ ಮತ್ತು ಅಧ್ಯಕ್ಷರಾಗಿರುವ ಫ್ರೆಡೆರಿಕ್‌ ಡಬ್ಲ್ಯೂ ಸ್ಮಿತ್‌ ಅವರ ಅಧಿಕಾರಾವಧಿ ಜೂನ್‌ 1ರಂದು ಮುಕ್ತಾಯಗೊಳ್ಳಲಿದೆ. ಅಲ್ಲಿಯವರೆಗೆಸುಬ್ರಮಣಿಯಂ ಕಾರ್ಯಾಧ್ಯಕ್ಷರಾಗಿರಲಿದ್ದಾರೆ.

ರಾಜ್ ಸುಬ್ರಮಣಿಯಂ ಅವರ ನಾಯಕತ್ವ ಗುಣ ಕಂಪನಿಯನ್ನು ಭವಿಷ್ಯದಲ್ಲಿ ಯಶಸ್ವಿಯತ್ತ ಕೊಂಡೊಯ್ಯಲಿದೆ ಎಂಬ ನಂಬಿಕೆ ಇದೆ ಎಂದು ಫ್ರೆಡರಿಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಫ್ರೆಡರಿಕ್‌ ಸ್ಮಿತ್‌ ಅವರು 1971ರಲ್ಲಿ ಫೆಡೆಕ್ಸ್‌ ಕಂಪನಿ ಸ್ಥಾಪಿಸಿದರು. ಟೆನ್ನೆಸ್ಸಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಫೆಡೆಕ್ಸ್‌ ಜಾಗತಿಕವಾಗಿ ಆರು ಲಕ್ಷ ನೌಕರರನ್ನು ಹೊಂದಿದೆ.

ಸುಬ್ರಮಣಿಯಂ ಅವರು 2020ರಲ್ಲಿ ಫೆಡೆಕ್ಸ್‌ ಮಂಡಳಿ ನಿರ್ದೇಶಕರಾಗಿ ಚುನಾಯಿತರಾಗಿದ್ದರು. ವ್ಯವಹಾರ ಕಾರ್ಯತಂತ್ರದಲ್ಲಿ ಜಾಗತಿಕವಾಗಿ 30 ವರ್ಷಗಳ ಅನುಭವ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.