ADVERTISEMENT

ಭಾರತೀಯ ಅಮೆರಿಕನ್ ವಿಜ್ಞಾನಿ ಜಯಂತ ಭಟ್ಟಾಚಾರ್ಯ ಎನ್ಐಎಚ್ ನಿರ್ದೇಶಕ

ಪಿಟಿಐ
Published 26 ಮಾರ್ಚ್ 2025, 14:00 IST
Last Updated 26 ಮಾರ್ಚ್ 2025, 14:00 IST
ಜೈ ಭಟ್ಟಾಚಾರ್ಯ
ಜೈ ಭಟ್ಟಾಚಾರ್ಯ   

ನ್ಯೂಯಾರ್ಕ್: ಅಮೆರಿಕದ ಪ್ರತಿಷ್ಠಿತ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (ಎನ್‌ಐಎಚ್‌) ನಿರ್ದೇಶಕರನ್ನಾಗಿ ಭಾರತೀಯ ಅಮೆರಿಕನ್ ವಿಜ್ಞಾನಿ ಜೈ (ಜಯಂತ) ಭಟ್ಟಾಚಾರ್ಯ ಅವರ ನೇಮಕವನ್ನು ಅಮೆರಿಕದ ಸೆನೆಟ್ ದೃಢೀಕರಿಸಿದೆ.  

ಅಮೆರಿಕದ ಆರೋಗ್ಯ ಇಲಾಖೆ ಅಡಿ ಕಾರ್ಯನಿರ್ವಹಿಸುತ್ತಿರುವ ಎನ್‌ಐಎಚ್‌, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಅತ್ಯುನ್ನತ ಸಂಸ್ಥೆಯಾಗಿದೆ.

ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಆರೋಗ್ಯ ನೀತಿ ಪ್ರಾಧ್ಯಾಪಕರಾಗಿರುವ ಭಟ್ಟಾಚಾರ್ಯ ಅವರ ನೇಮಕವನ್ನು 53–47 ಮತಗಳಿಂದ ದೃಢೀಕರಿಸಲಾಗಿದೆ ಎಂದು ಸೆನೆಟ್‌ನ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. 

ADVERTISEMENT

ಕಳೆದ ವರ್ಷದ ನವೆಂಬರ್‌ನಲ್ಲಿ ಅಮೆರಿಕದ ಅಧ್ಯಕ್ಷ ಆಗಿ ಆಯ್ಕೆಯಾದ ಸಂದರ್ಭದಲ್ಲಿ, ಡೊನಾಲ್ಡ್ ಟ್ರಂಪ್ ಅವರು, ಭಟ್ಟಾಚಾರ್ಯ ಅವರನ್ನು ಎನ್ಐಎಚ್‌ನ 18ನೇ ನಿರ್ದೇಶಕರನ್ನಾಗಿ ನಾಮನಿರ್ದೇಶನ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.