ವಾಷಿಂಗ್ಟನ್: ಮಾಜಿ ಪತ್ನಿಯ ಹತ್ಯೆಗೆ ಸುಪಾರಿ ನೀಡಿದ ಆರೋಪದ ಮೇಲೆ ಭಾರತ ಮೂಲದ ಅಮೆರಿಕದ ಉದ್ಯಮಿ ನರ್ಸಾನ್ ಲಿಂಗಾಲ ಹಾಗೂ ಆಕೆಯ ಪ್ರಿಯತಮೆ ಸಂಧ್ಯಾ ರೆಡ್ಡಿಯನ್ನು ಬಂಧಿಸಲಾಗಿದೆ.
ಪತ್ನಿಯ ಹತ್ಯೆಗೆ ಸುಪಾರಿ ನೀಡುವ ಸಂಬಂಧ ಪರಿಚಿತರ ಮೂಲಕ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದರು. ಈ ವಿಷಯ ತಿಳಿದ ತಕ್ಷಣ ಪೊಲೀಸರೊಬ್ಬರು ಮಫ್ತಿಯಲ್ಲಿ ಲಿಂಗಾಲ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ವೇಳೆ ಮಾಜಿ ಪತ್ನಿಯನ್ನು ಹತ್ಯೆಮಾಡಿದರೆ 5 ಸಾವಿರ ಡಾಲರ್ ನೀಡಲು ಸಿದ್ಧವಿರುವುದಾಗಿ ತಿಳಿಸಿದ್ದರು. ಅದರಂತೆ, ಮುಂಗಡವಾಗಿ 1 ಸಾವಿರ ಡಾಲರ್ ನೀಡಲು ಮುಂದಾದ ವೇಳೆ ಅಧಿಕಾರಿಗಳು ಲಿಂಗಾಲ ಮತ್ತು ರೆಡ್ಡಿಯನ್ನು ಬಂಧಿಸಿದ್ದಾರೆ.
ನ್ಯಾಯಾಲಯದಲ್ಲಿ ಇಬ್ಬರ ವಿರುದ್ಧ ಆರೋಪ ಸಾಬೀತಾದರೆ ಕನಿಷ್ಠ 10 ವರ್ಷ ಜೈಲು ಹಾಗೂ 2.5ಲಕ್ಷ ಡಾಲರ್ ದಂಡ ತೆರಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.