
ಪಿಟಿಐ
ಒಟ್ಟಾವಾ: ಭಾರತದ ಉದ್ಯಮಿಯೊಬ್ಬರನ್ನು, ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಪ್ರಾಂತ್ಯದ ಅಬ್ಬಾಟ್ಸ್‌ಫೋರ್ಡ್ ನಗರದಲ್ಲಿರುವ ಮನೆಯಲ್ಲೇ ಉದ್ಯಮಿ ದರ್ಶನ್ ಸಹ್ಸಿ ಅವರನ್ನು ಸೋಮವಾರ ಹತ್ಯೆ ಮಾಡಲಾಗಿದೆ. ಇದು ಉದ್ದೇಶಿತ ಕೊಲೆ ಎಂದು ಶಂಕಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿದ್ದ ದರ್ಶನ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಕರೆತಂದರೂ ಪ್ರಯೋಜನವಾಗಲಿಲ್ಲ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದ್ದು, ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಹೇಳಿದ್ದಾರೆ.
ದರ್ಶನ್ ಅವರು ‘ಕ್ಯಾನಂ ಇಂಟರ್‌ನ್ಯಾಷನಲ್’ ಎಂಬ ಜವಳಿ ಮರುಸಂಸ್ಕರಣೆ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಪಂಜಾಬ್‌ನವರಾಗಿದ್ದ ಇವರು ಸಿಖ್ ಸಮುದಾಯಕ್ಕೆ ಸೇರಿದ್ದರು ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.