ADVERTISEMENT

ಶಾಂಘೈಗೆ ರಾಗಿ ಮಣಿಂದರ್‌ ಸಿಂಗ್‌ ಭೇಟಿ; ಭಾರತೀಯ ಕಾನ್ಸುಲೇಟ್‌ ಸನ್ಮಾನ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 14:13 IST
Last Updated 6 ನವೆಂಬರ್ 2025, 14:13 IST
   

ಬೀಜಿಂಗ್‌: ಶಾಂಘೈಗೆ ಭೇಟಿ ನೀಡಿದ ಅಮೃತಸರದ ಸ್ವರ್ಣ ಮಂದಿರದ ಖ್ಯಾತ ‘ರಾಗಿ’ (ಭಕ್ತಿಗೀತೆ ಗಾಯಕ) ಭಾಯಿ ಮಣೀಂದರ್‌ ಸಿಂಗ್‌ ಜೀ ಅವರನ್ನು ಅಲ್ಲಿರುವ ಭಾರತೀಯ ಕಾನ್ಸುಲೇಟ್‌ ಜನರಲ್‌ (ಸಿಜೆ) ಪ್ರತೀಕ್‌ ಮಾಥುರ್‌ ಅವರು ಗುರುವಾರ ಭೇಟಿಯಾಗಿ, ಸನ್ಮಾನಿಸಿದರು.

ಶ್ರೀ ಗುರುನಾನಕ್‌ ದೇವ್‌ ಜೀ ಅವರ ಪ್ರಕಾಶ ಉತ್ಸವದ ಸಂದರ್ಭದಲ್ಲಿ ಮಾಥುರ್‌ ಅವರು ಅಮೃತಸರದ ಶ್ರೀ ದರ್ಬಾರ್‌ ಸಾಹಿಬ್‌ನ  (ಸ್ವರ್ಣ ಮಂದಿರ) ಪ್ರಸಿದ್ಧ ‘ರಾಗಿ’ ಭಾಯಿ ಮಣಿಂದರ್‌ ಸಿಂಗ್‌ ಜೀ ಅವರನ್ನು ಭೇಟಿಯಾದರು ಎಂದು  ಶಾಂಘೈನಲ್ಲಿರುವ ಕಾನ್ಸುಲೇಟ್‌ ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ತಿಳಿಸಿದೆ.

ಶಾಂಘೈಗೆ ಭೇಟಿ ನೀಡಿದಕ್ಕೆ ಮಣೀಂದರ್‌ ಸಿಂಗ್‌ ಅವರಿಗೆ ಧನ್ಯವಾದ ಸಲ್ಲಿಸಿದ ಮಾಥುರ್, ‘ಎಲ್ಲರ ಕಲ್ಯಾಣವನ್ನು ಬಯಸುವ ಹಾಗೂ ಸಿಖ್‌ ಮೌಲ್ಯಗಳನ್ನು ಪ್ರಚುರಪಡಿಸುವಲ್ಲಿ ಪ್ರಮುಖ ಪಾತ್ರವಹಿಸುವ ಸಿಂಗ್‌ ಅವರ ಪ್ರಯತ್ನಕ್ಕೆ ಕೃತಜ್ಞತೆ ಸಲ್ಲಿಸುವೆ’ ಎಂದರು.

ADVERTISEMENT

ಗುರು ಗ್ರಂಥ ಸಾಹಿಬ್‌ನ ಕೀರ್ತನೆಗಳು ಅಥವಾ ಭಕ್ತಿಗೀತೆಗಳನ್ನು ಹಾಡುವವರನ್ನು ಸಿಖ್ ಧರ್ಮೀಯರು ‘ರಾಗಿ’ ಎಂದು ಕರೆಯುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.