ADVERTISEMENT

ತಾವು ಸಾಕಿದ ಜಾಗ್ವಾರ್, ಕರಿಚಿರತೆ ಬಿಟ್ಟು ಬರಲು ನಿರಾಕರಿಸಿದ ಭಾರತೀಯ ವೈದ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಮಾರ್ಚ್ 2022, 8:07 IST
Last Updated 8 ಮಾರ್ಚ್ 2022, 8:07 IST
ಕರಿಚಿರತೆ
ಕರಿಚಿರತೆ   

ಕೀವ್: ತಾನು ಸಾಕಿದ್ದ ಜಾಗ್ವಾರ್ ಮತ್ತು ಕರಿಚಿರತೆಗಳನ್ನು ಬಿಟ್ಟು ಬರಲು ಉಕ್ರೇನ್‌ನಲ್ಲಿರುವ ಭಾರತ ಮೂಲದ ವೈದ್ಯ ನಿರಾಕರಿಸಿದ್ದಾರೆ ಎಂದು ಎಎನ್‌ಐ ಟ್ವೀಟ್ ಮಾಡಿದೆ.

ಆಂಧ್ರ ಪ್ರದೇಶ ಮೂಲದ ಡಾ. ಗಿರಿಕುಮಾರ್ ಪಾಟೀಲ್, 2007ರಲ್ಲಿ ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಉಕ್ರೇನ್‌ಗೆ ತೆರಳಿದ್ದ ಅವರು, ಬಳಿಕ ಅಲ್ಲಿಯೇ ಕೆಲಸಕ್ಸೆ ಸೇರಿದ್ದರು. ಇದೀಗ, ಯುದ್ಧ ನಡೆಯುತ್ತಿರುವುದರಿಂದ ಭಾರತೀಯರನ್ನು ವಾಪಸ್ ಕರೆತರಲಾಗುತ್ತಿದೆ. ಆದರೆ, ತಮ್ಮ ಸಾಕು ಪ್ರಾಣಿಗಳಿಗೆ ವಿಮಾನದಲ್ಲಿ ಅವಕಾಶ ನೀಡದ ಕಾರಣ ಅವರೂ ಸಹ ಅಲ್ಲಿಯೇ ಉಳಿದಿದ್ದಾರೆ.

ಗಿರಿಕುಮಾರ್ ಸಾಕಿರುವ ಜಾಗ್ವಾರ್‌ಗೆ 20 ತಿಂಗಳಾಗಿದ್ದು, ಪ್ಯಾಂಥರ್‌ನ ವಯಸ್ಸು 6 ತಿಂಗಳು ಮಾತ್ರ.

ADVERTISEMENT

‘ನಾನು ನನ್ನ ಸಾಕು ಪ್ರಾಣಿಗಳ ಜೊತೆ ಭಾರತಕ್ಕೆ ತೆರಳಲು (ಭಾರತೀಯ) ರಾಯಭಾರ ಕಚೇರಿಗೆ ಕರೆ ಮಾಡಿ ಮನವಿ ಮಾಡಿದ್ದೆ. ಆದರೆ, ಅಲ್ಲಿಂದ ಸರಿಯಾದ ಪ್ರತಿಕ್ರಿಯೆ ಸಿಗಲಿಲ್ಲ. ನಾನು ಇರುವ ಪ್ರದೇಶವನ್ನು ರಷ್ಯಾ ಸೇನೆ ಸುತ್ತುವರಿದಿದೆ. ಆದರೆ, ನಾನು ನನ್ನ ಪ್ರಯತ್ನ ಮಾಡುತ್ತಿದ್ದೇನೆ. ನಾನು ಅವುಗಳನ್ನು (ಸಾಕುಪ್ರಾಣಿಗಳನ್ನು) ನನ್ನ ಮಕ್ಕಳಂತೆ ಪರಿಗಣಿಸುತ್ತೇನೆ’ ಎಂದು ಡಾ. ಪಾಟೀಲ್ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್‌ಐ ಟ್ವೀಟ್ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.