ADVERTISEMENT

ಚೀನಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಆವರಣದಲ್ಲಿ ಯೋಗದಿನ ಆಚರಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜೂನ್ 2020, 7:18 IST
Last Updated 21 ಜೂನ್ 2020, 7:18 IST
   

ಬೀಜಿಂಗ್: ಚೀನಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಆವರಣದಲ್ಲಿ6ನೇ ಅಂತರರಾಷ್ಟ್ರೀಯ ಯೋಗದಿನದ ಪ್ರಯುಕ್ತ ಯೋಗಾಭ್ಯಾಸ ಮಾಡಲಾಯಿತು.ಸದ್ಯ ಕೋವಿಡ್–19 ಸೋಂಕು ಭೀತಿ ಇರುವುದರಿಂದ ಸುರಕ್ಷತೆದೃಷ್ಟಿಯಿಂದ ಸಾಮಾಜಿಕ ಅಂತರ ನಿಯಮವನ್ನು ಅನುಸರಿಸಲಾಯಿತು.

‘ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಆವರಣದಲ್ಲಿ ಅಂತರರಾಷ್ಟ್ರೀಯ ಯೋಗದಿನದ ಪ್ರಯುಕ್ತ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಆಶಿಷ್‌ ಬಹುಗುಣ ಅವರ ನೇತೃತ್ವದಲ್ಲಿ ಯೋಗದಿನ ಆಚರಿಸಲಾಯಿತು. ಈ ವೇಳೆ ಸುರಕ್ಷತೆಯ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿದೆ. 2020ರ ಯೋಗದಿನವನ್ನು ಚಿಕ್ಕದಾಗಿ ಆಚರಿಸಲಾಯಿತಾದರೂ ಸುಂದರವಾಗಿತ್ತು’ ಎಂದು ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

ಭಾರತದ ರಾಯಭಾರಿ ವಿಕ್ರಮ್‌ ಮಿಸ್ರಿ ಅವರೂ, ‘ಈ ವರ್ಷ ಸರಳವಾಗಿಯಾದರೂ ಸುಂದರವಾಗಿ ಆಚರಿಸಿದ್ದೇವೆ. ಈ ದಿನ ಬೆಳಗ್ಗೆ ರಾಯಭಾರ ಕಚೇರಿ ಆವರಣದಲ್ಲಿ ಸುರಕ್ಷತಾ ಕ್ರಮಗಳೊಂದಿಗೆ ಯೋಗದಿನ ಆಚರಿಸಲಾಯಿತು’ ಎಂದು ಟ್ವೀಟ್‌ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.