
ಪಿಟಿಐ
ಒಟ್ಟಾವಾ: ಕೆನಡಾದಲ್ಲಿರುವ ಭಾರತದ ಹೈಕಮಿಷನರ್ ದಿನೇಶ್ ಕೆ. ಪಟ್ನಾಯಕ್ ಅವರು ಅಲ್ಬರ್ಟಾ ಪ್ರಾಂತ್ಯದ ಮುಖ್ಯಸ್ಥ ಡೇನಿಯಲ್ ಸ್ಮಿತ್ ಅವರನ್ನು ಭೇಟಿ ಮಾಡಿ, ದ್ವಿಪಕ್ಷೀಯ ಪಾಲುದಾರಿಕೆ ಕುರಿತು ಮಾತುಕತೆ ನಡೆಸಿದ್ದಾರೆ.
ಈ ಭೇಟಿಯಲ್ಲಿ ಇಂಧನ, ವ್ಯಾಪಾರ, ಕೃಷಿ ಮತ್ತು ತಂತ್ರಜ್ಞಾನದಲ್ಲಿ ಉಭಯ ದೇಶಗಳ ಸಹಯೋಗದ ಕುರಿತು ಚರ್ಚಿಸಲಾಗಿದೆ.
‘ನ್ಯಾಯೋಚಿತ, ಸಮತೋಲಿತ ಮತ್ತು ಪರಸ್ಪರ ಲಾಭದಾಯಕ ಸಹಕಾರದ ಮೂಲಕ ಬಾಂಧವ್ಯ ವೃದ್ಧಿಸಿಕೊಳ್ಳುವಷ್ಟು ಸಾಮರ್ಥ್ಯ ಉಭಯ ದೇಶಗಳಿಗೂ ಇದೆ’ ಎಂಬ ಪಟ್ನಾಯಕ್ ಹೇಳಿಕೆಯನ್ನು ಒಟ್ಟಾವಾದಲ್ಲಿರುವ ಭಾರತ ಹೈಕಮಿಷನ್ ಸಾಮಾಜಿಕ ಮಾಧ್ಯಮದಲ್ಲಿ ಸೋಮವಾರ ಹಂಚಿಕೊಂಡಿದೆ.
ಭಾರತದೊಂದಿಗೆ ಅಲ್ಬರ್ಟಾ ಆಳವಾದ ಸಂಬಂಧವನ್ನು ಹೊಂದಿದೆ ಮತ್ತು ಈ ಪಾಲುದಾರಿಕೆಯನ್ನು ಮುಂದಿನ ಹಂತಕ್ಕೆ ಹೇಗೆ ಕೊಂಡೊಯ್ಯಬೇಕು ಎಂಬುದರ ಕುರಿತು ಚರ್ಚೆ ನಡೆಸಲಾಯಿತು ಎಂದು ಸ್ಮಿತ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.