ADVERTISEMENT

ನೊಬೆಲ್ ಶಾಂತಿ ಪ್ರಶಸ್ತಿ ಪಟ್ಟಿಯಲ್ಲಿ 'ಆಲ್ಟ್‌ ನ್ಯೂಸ್'ನ​​ ಜುಬೇರ್​​, ಪ್ರತೀಕ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಅಕ್ಟೋಬರ್ 2022, 10:49 IST
Last Updated 5 ಅಕ್ಟೋಬರ್ 2022, 10:49 IST
 ಜುಬೇರ್​​, ಪ್ರತೀಕ್
ಜುಬೇರ್​​, ಪ್ರತೀಕ್   

ನವದೆಹಲಿ: ಫ್ಯಾಕ್ಟ್‌ ಚೆಕಿಂಗ್‌ ವೆಬ್‌ಸೈಟ್‌ 'ಆಲ್ಟ್‌ ನ್ಯೂಸ್' ಸಹ ಸಂಸ್ಥಾಪಕರಾದ ಪತ್ರಕರ್ತ ಮೊಹಮ್ಮದ್‌ ಜುಬೇರ್‌ ಮತ್ತು ಪ್ರತೀಕ್ ಸಿನ್ಹಾ ಅವರು2022ರ ನೊಬೆಲ್ ಶಾಂತಿ ಪ್ರಶಸ್ತಿ ಪಡೆಯುವ ಸ್ಪರ್ಧಿಗಳ ಪಟ್ಟಿಯಲ್ಲಿದ್ದಾರೆ.

‘ಟೈಮ್‌‘ ವೆಬ್‌ಸೈಟ್‌ ವರದಿ ಮಾಡಿರುವ ಪ್ರಕಾರ ಇವರ ಹೆಸರುಗಳನ್ನು ಸಾರ್ವಜನಿಕರು ನಾಮನಿರ್ದೇಶನ ಮಾಡಿದ್ದಾರೆ.

ನಾರ್ವೆ ಸಂಸದರು, ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ ಓಸ್ಲೋ (PRIO) ಬಹಿರಂಗಪಡಿಸಿದ ನಾಮನಿರ್ದೇಶನಗಳ ಆಧಾರದ ಮೇಲೆ ನೊಬೆಲ್‌ ಶಾಂತಿ ಪ್ರಶಸ್ತಿ ಪಡೆಯುವ ಪಟ್ಟಿಯಲ್ಲಿಮೊಹಮ್ಮದ್‌ ಜುಬೇರ್‌ ಮತ್ತು ಪ್ರತೀಕ್ ಸಿನ್ಹಾ ಹೆಸರು ಸೇರಿವೆ ಎಂದು ವರದಿಯಾಗಿದೆ.

ADVERTISEMENT

2022ರನೊಬೆಲ್ ಶಾಂತಿ ಪ್ರಶಸ್ತಿ ಸ್ಪರ್ಧೆಪಟ್ಟಿಯಲ್ಲಿ ಸುಮಾರು 343 ಅಭ್ಯರ್ಥಿಗಳಿದ್ದಾರೆ. ಈ ಪೈಕಿ 251 ವ್ಯಕ್ತಿಗಳು ಮತ್ತು 92 ಸಂಸ್ಥೆಗಳನ್ನು ನಾಮನಿರ್ದೇಶನ ಮಾಡಲಾಗಿದೆ. ಈ ಪಟ್ಟಿಯಲ್ಲಿ ಜುಬೇರ್‌ ಮತ್ತು ಪ್ರತೀಕ್ ಸಿನ್ಹಾ ಹೆಸರು ಸೇರಿರುವುದು ವಿಶೇಷ.

ಟ್ವೀಟ್‌ವೊಂದರ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪಗಳ ಮೇಲೆ ಮೊಹಮ್ಮದ್‌ ಜುಬೇರ್‌ ಅವರನ್ನು ದೆಹಲಿ ಪೊಲೀಸರು ಕಳೆದ ಜೂನ್‌ ತಿಂಗಳಲ್ಲಿ ಬಂಧಿಸಿದ್ದರು.

ಜುಬೇರ್‌ ವಿರುದ್ಧ ಐಪಿಸಿ ಸೆಕ್ಷನ್‌ 153ಎ (ಧಾರ್ಮಿಕ, ಜನಾಂಗೀಯ, ಹುಟ್ಟಿದ ಸ್ಥಳ, ಭಾಷೆಯ ಹಿನ್ನೆಯಲ್ಲಿ ಭಿನ್ನ ಗುಂಪುಗಳ ನಡುವೆ ದ್ವೇಷವನ್ನು ಹರಡುವುದು) ಹಾಗೂ 295ಎ (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಉದ್ದೇಶಪೂರ್ವಕವಾಗಿ ನಡೆಸಿದ ಕೃತ್ಯ) ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.