ADVERTISEMENT

ರವೀಶ್‌ಗೆ ಮ್ಯಾಗ್ಸೆಸೆ ಪ್ರಶಸ್ತಿ ಪ್ರದಾನ

ಪಿಟಿಐ
Published 9 ಸೆಪ್ಟೆಂಬರ್ 2019, 20:01 IST
Last Updated 9 ಸೆಪ್ಟೆಂಬರ್ 2019, 20:01 IST
ಮನಿಲಾದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ರವೀಶ್‌ ಕುಮಾರ್‌ (ಎಡತುದಿ) ಪ್ರಶಸ್ತಿ ಸ್ವೀಕರಿಸಿದರು. ಫಿಲಿಪ್ಪೀನ್ಸ್‌ ಉಪಾಧ್ಯಕ್ಷೆ  ಲಿಯೊನರ್ ರಾಬ್ರೆಡೊ, ರೇಮನ್‌ ಮ್ಯಾಗ್ಸೆಸೆ ಮಂಡಳಿಯ ಟ್ರಸ್ಟಿ ಜೋಸ್‌ ಕ್ರೂಸಿಯಾ ಜೂನಿಯರ್‌ ಇದ್ದಾರೆ ಎಪಿ ಚಿತ್ರ 
ಮನಿಲಾದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ರವೀಶ್‌ ಕುಮಾರ್‌ (ಎಡತುದಿ) ಪ್ರಶಸ್ತಿ ಸ್ವೀಕರಿಸಿದರು. ಫಿಲಿಪ್ಪೀನ್ಸ್‌ ಉಪಾಧ್ಯಕ್ಷೆ  ಲಿಯೊನರ್ ರಾಬ್ರೆಡೊ, ರೇಮನ್‌ ಮ್ಯಾಗ್ಸೆಸೆ ಮಂಡಳಿಯ ಟ್ರಸ್ಟಿ ಜೋಸ್‌ ಕ್ರೂಸಿಯಾ ಜೂನಿಯರ್‌ ಇದ್ದಾರೆ ಎಪಿ ಚಿತ್ರ    

ಮನಿಲಾ:ಭಾರತದ ಹಿರಿಯ ಪತ್ರಕರ್ತ ರವೀಶ್‌ ಕುಮಾರ್‌ ಅವರಿಗೆಏಷ್ಯಾದ ಅತ್ಯುನ್ನತ ಗೌರವವಾದ ರೇಮನ್‌ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಸೋಮವಾರ ಇಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.

ಈ ವೇಳೆ ಮಾತನಾಡಿದ ರವೀಶ್‌, ‘ಭಾರತದ ಮಾಧ್ಯಮ ಬಿಕ್ಕಟ್ಟಿನ ಸ್ಥಿತಿಯಲ್ಲಿದೆ. ಅದು ಅಚಾನಕ್ ಅಲ್ಲ ಅಥವಾ ಮನಬಂದಂತೆ ಆದುದಲ್ಲ. ಆದರೆ ವ್ಯವಸ್ಥಿತ ಮತ್ತು ರಚನಾತ್ಮಕವಾದುದು ಎಂದು ಹೇಳಿದರು.

‘ಬಿಕ್ಕಟ್ಟಿನ ಕುರಿತು ಮೌಲ್ಯಮಾಪನ ಮಾಡುವುದು ಈಗ ಅತಿ ಹೆಚ್ಚು ಮುಖ್ಯವಾಗಿದೆ’ ಎಂದು ರವೀಶ್‌ ಹೇಳಿದರು.

ADVERTISEMENT

ಎನ್‌ಡಿಟಿವಿ ಹಿರಿಯ ಕಾರ್ಯನಿರ್ವಹಣಾ ಸಂಪಾದಕರಾಗಿರುವ 44 ವರ್ಷದ ರವೀಶ್‌ ಅವರು ಪ್ರಶಸ್ತಿಗೆ ಆಯ್ಕೆಯಾದ ಐವರಲ್ಲಿ ಒಬ್ಬರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.