ADVERTISEMENT

ಟಿವಿ ರಿಮೋಟ್‌ಗಾಗಿ ತಾಯಿಯನ್ನೇ ಕೊಂದ ಭಾರತ ಮೂಲದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಪಿಟಿಐ
Published 13 ಸೆಪ್ಟೆಂಬರ್ 2025, 9:36 IST
Last Updated 13 ಸೆಪ್ಟೆಂಬರ್ 2025, 9:36 IST
   

ಲಂಡನ್‌: ತಾಯಿಯನ್ನು ಹತ್ಯೆ ಮಾಡಿದ್ದ ಆರೋಪದ ಮೇಲೆ ಭಾರತ ಮೂಲದ ವ್ಯಕ್ತಿಗೆ ಬ್ರಿಟನ್‌ ನ್ಯಾಯಾಲಯವು ಶನಿವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

2024ರ ಸೆಪ್ಟೆಂಬರ್‌ನಲ್ಲಿ ಟಿವಿ ರಿಮೋಟ್‌ಗಾಗಿ ತಾಯಿ ಮತ್ತು ಮಗನ ನಡುವೆ ನಡೆದ ಜಗಳವು ಕೊಲೆಯಲ್ಲಿ ಅಂತ್ಯವಾಗಿತ್ತು.

ಭಾರತ ಮೂಲದ ಸುರ್ಜಿತ್‌ ಸಿಂಗ್‌(39) ಎನ್ನುವ ವ್ಯಕ್ತಿಯು, ತನ್ನ ತಾಯಿ ಮೊಹಿಂದರ್ ಕೌರ್(76) ಅವರನ್ನು ಬರ್ಮಿಂಗ್ಹ್ಯಾಮ್‌ನಲ್ಲಿರುವ ಮನೆಯಲ್ಲಿ ಹತ್ಯೆ ಮಾಡಿ‌ದ್ದ.

ಘಟನೆಯ ನಂತರ ಆರೋಪಿಯನ್ನು ಬರ್ಮಿಂಗ್ಹ್ಯಾಮ್‌ ಪೊಲೀಸರು ಬಂಧಿಸಿದ್ದರು. ತನಿಖೆಯ ವೇಳೆ ಸುರ್ಜಿತ್‌ ಸಿಂಗ್‌ ಅವರ ರಕ್ತದಲ್ಲಿ ಅಲ್ಕೋಹಾಲ್‌ ಅಂಶ ಕಂಡುಬಂದಿತ್ತು.

ಆರೋಪಿಗೆ ಬ್ರಿಟನ್‌ ನ್ಯಾಯಾಲಯವು ಜೀವಾವಧಿ ಶಿಕ್ಷೆ ಘೋಷಿಸಿದ್ದು, ಕನಿಷ್ಠ 15 ವರ್ಷಗಳ ಸೆರೆವಾಸ ಅನುಭವಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.