ಮಹಿಳೆ ಸಾವು
(ಪ್ರಾತಿನಿಧಿಕ ಚಿತ್ರ)
ಸಿಂಗಪುರ: ಇಲ್ಲಿನ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯನ ಸಾವಿಗೆ ನಿಯಮ ಪಾಲಿಸದೆ ಇರುವುದು ಕಾರಣ ಎಂದು ಸಿಂಗಪುರ ತನಿಖೆ ಸಂಸ್ಥೆಯ ವರದಿ ತಿಳಿಸಿದೆ.
ಪೊನ್‌ರಾಮನ್ ಏಳುಮಲೈ (23) ಯಂತ್ರಕ್ಕೆ ಸಿಕ್ಕಿ ಮೃತಪಟ್ಟಿದ್ದರು. ಕೆಲಸದ ಸ್ಥಳದಲ್ಲಿ ಕೆಲಸಗಾರರ ರಕ್ಷಣೆ ಹೊಣೆಯು ಟ್ರಕ್ ನಿರ್ವಾಹಕನದ್ದೇ ಆಗಿರುತ್ತದೆ. ಆದರೆ, ಏಳುಮಲೈ ಅವರು ಟ್ರಕ್‌ನಲ್ಲಿರುವ ಯಂತ್ರದಲ್ಲಿ ಸಿಕ್ಕಿಕೊಂಡಿದ್ದನ್ನು ಪತ್ತೆಹಚ್ಚುವಲ್ಲಿಯೂ ಟ್ರಕ್ ನಿರ್ವಾಹಕ ಸಹ ವಿಫಲರಾಗಿದ್ದಾರೆ ಎಂದು ಕೊರೊನೆರ್ ಬ್ರೆಂಡಾ ಚುವಾ ಬಿಡುಗಡೆ ಮಾಡಿದ ತನಿಖಾ ವರದಿಯಲ್ಲಿ ತಿಳಿಸಲಾಗಿದೆ.
ಟಿಎಂಸಿ ಕಾಂಕ್ರೀಟ್ ಪಂಪಿಂಗ್ ಸೇವೆಗಳ ಸಂಸ್ಥೆಯಲ್ಲಿ ಸಹಾಯಕ ಪಂಪ್ ಆಪರೇಟರ್ ಆಗಿದ್ದ ಏಳುಮಲೈ ಅವರು 2023ರ ಡಿಸೆಂಬರ್ 2ರಂದು ಯಂತ್ರ ಮತ್ತು ಟ್ರಕ್ ಮಧ್ಯೆ ಸಿಲುಕಿದ್ದರು. ಎದೆಯ ಭಾಗಕ್ಕೆ ತೀವ್ರವಾಗಿ ಪೆಟ್ಟುಬಿದ್ದು, ದೇಹದಿಂದ ರಕ್ತ ಸುರಿದಿತ್ತು. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, 18 ಗಂಟೆಗಳ ಬಳಿಕ ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.