ADVERTISEMENT

ನ್ಯಾಷನಲ್ ಜಿಯಾಗ್ರಫಿಕ್‌ 'ವರ್ಷದ ಚಿತ್ರ' ಪ್ರಶಸ್ತಿ ಗೆದ್ದ ಭಾರತ ಮೂಲದ ಎಂಜಿನಿಯರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಫೆಬ್ರುವರಿ 2023, 4:58 IST
Last Updated 19 ಫೆಬ್ರುವರಿ 2023, 4:58 IST
ನ್ಯಾಷನಲ್‌ ಜಿಯಾಗ್ರಫಿಕ್‌ ‘ವರ್ಷದ ಚಿತ್ರ’ ಪ್ರಶಸ್ತಿ ಗೆದ್ದ ಕಾರ್ತಿಕ್‌ ಸುಬ್ರಮಣ್ಯಂ ಅವರ ಚಿತ್ರ (ಚಿತ್ರ: ಕಾರ್ತಿಕ್‌ ಸುಬ್ರಮಣ್ಯಂ)
ನ್ಯಾಷನಲ್‌ ಜಿಯಾಗ್ರಫಿಕ್‌ ‘ವರ್ಷದ ಚಿತ್ರ’ ಪ್ರಶಸ್ತಿ ಗೆದ್ದ ಕಾರ್ತಿಕ್‌ ಸುಬ್ರಮಣ್ಯಂ ಅವರ ಚಿತ್ರ (ಚಿತ್ರ: ಕಾರ್ತಿಕ್‌ ಸುಬ್ರಮಣ್ಯಂ)   

ನವದೆಹಲಿ: ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನೆಲೆಸಿರುವ ಭಾರತ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಕಾರ್ತಿಕ್ ಸುಬ್ರಮಣ್ಯಂ ಅವರ 'ಡ್ಯಾನ್ಸ್ ಆಫ್ ದಿ ಈಗಲ್ಸ್' ಶೀರ್ಷಿಕೆಯ ಛಾಯಾಚಿತ್ರವು 'ನ್ಯಾಷನಲ್ ಜಿಯಾಗ್ರಫಿಕ್‌'ನ 'ವರ್ಷದ ಚಿತ್ರ' ಸ್ಪರ್ಧೆಯನ್ನು ಗೆದ್ದಿದೆ.

ಚಿತ್ರವು ಅಲಾಸ್ಕಾದ ‘ಚಿಲ್ಕಟ್ ಬಾಲ್ಡ್ ಈಗಲ್ ಸಂರಕ್ಷಣಾ ವಲಯ’ದಲ್ಲಿನ ಬಿಳಿತಲೆಯ ಹದ್ದುಗಳದ್ದಾಗಿದೆ.

‘ಅವುಗಳ (ಹದ್ದುಗಳ) ಚಟುವಟಿಕೆ ಮತ್ತು ನಡವಳಿಕೆಯನ್ನು ಗಂಟೆಗಟ್ಟಲೆ ಗಮನಿಸಿದ ನನಗೆ ಅವುಗಳ ಅಪೂರ್ವ ಕ್ಷಣದ ಚಿತ್ರ ಸೆರೆಹಿಡಿಯಲು ಸಾಧ್ಯವಾಯಿತು’ ಎಂದು ಸುಬ್ರಮಣ್ಯಂ ಹೇಳಿದರು.

ADVERTISEMENT

ವೃತ್ತಿಯಿಂದ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಕಾರ್ತಿಕ್‌ ಛಾಯಾಗ್ರಹಣವನ್ನು ಹವ್ಯಾಸವಾಗಿ ರೂಢಿಸಿಕೊಂಡಿದ್ದಾರೆ.

ಅಲಾಸ್ಕಾದ ಹೈನೆಸ್‌ ಎಂಬಲ್ಲಿರುವ ಚಿಲ್ಕಟ್‌ ಹದ್ದು ಸಂರಕ್ಷಣಾ ವಲಯಕ್ಕೆ ಚಳಿಗಾಲದ ಆರಂಭಕ್ಕೂ ಮುನ್ನ ವಿಶ್ವದ ನಾನಾ ಕಡೆಗಳಿಂದ ಹದ್ದುಗಳು ವಲಸೆ ಬರುತ್ತವೆ. ಇಲ್ಲಿನ ನದಿಗಳಲ್ಲಿ ಸಾಲ್ಮನ್‌ ಮೀನುಗಳನ್ನು ಭೇಟೆಯಾಡುತ್ತವೆ. ಈ ಸಂದರ್ಭದಲ್ಲಿ ಸುಬ್ರಮಣ್ಯಂ ಅವರು ತೆಗೆದ ಚಿತ್ರ ಮನ್ನಣೆಗೆ ಪಾತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.