ADVERTISEMENT

ಸಿಂಗಪುರದಲ್ಲಿ ಕೋವಿಡ್ ನಿಯಮ ಉಲ್ಲಂಘನೆ; ದಂಪತಿಗೆ ಜೈಲು

ಪಿಟಿಐ
Published 26 ಫೆಬ್ರುವರಿ 2021, 10:40 IST
Last Updated 26 ಫೆಬ್ರುವರಿ 2021, 10:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಿಂಗಪುರ: ‘ಕೋವಿಡ್‌ 19‘ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತ ಮೂಲದ ಮಹಿಳೆ ಮತ್ತು ಆಕೆಯ ಬ್ರಿಟನ್‌ ಮೂಲದ ಪತಿ ಸಿಂಗಪುರದಲ್ಲಿ ಜೈಲು ವಾಸ ಅನುಭವಿಸಿದ್ದಾರೆ.

ಅಗಾಥಾ ಮಾಘೇಶ್ ಇಯಾಮಲೈ ಎಂಬುವರಿಗೆ ಒಂದು ವಾರ ಜೈಲು ಮತ್ತು ಇವರ ಪತಿ ನಿಗೆಲ್ ಸ್ಕಿಯಾ ಅವರಿಗೆ ಎರಡು ವಾರ ಜೈಲು ಮತ್ತು ₹55,027 (1 ಸಾವಿರ ಸಿಂಗಪುರ ಡಾಲರ್‌) ದಂಡವನ್ನು ವಿಧಿಸಲಾಗಿದೆ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ನಿಗೆಲ್, ಸೆಪ್ಟೆಂಬರ್‌ನಲ್ಲಿ ತನ್ನ ಪ್ರೇಯಸಿ ಇಯಾಮಲೈ ನೋಡಲು ಲಂಡನ್‌ನಿಂದ ಸಿಂಗಪುರಕ್ಕೆ ಬಂದು, ಹೋಟೆಲ್‌ವೊಂದರಲ್ಲಿ ಉಳಿದಿದ್ದರು. ‘ಕೋವಿಡ್‌ 19‘ ಮಾರ್ಗಸೂಚಿ ಪ್ರಕಾರ, ಅವರಿಗೆ ‘ಸ್ಟೇ ಹೋಮ್‌‘ (ಮನೆಯಲ್ಲೇ ಇರುವಂತೆ) ನೋಟಿಸ್ ನೀಡಲಾಗಿತ್ತು. ಆದರೂ, ನಿಗಲ್‌, ಕೋವಿಡ್‌ ನಿಯಮ ಉಲ್ಲಂಘಿಸಿ, ತಾನು ಉಳಿದಿದ್ದ ಹೋಟೆಲ್‌ ಕೊಠಡಿಯಲ್ಲಿ ಇಯಾಮಲೈ ಅವರನ್ನು ಭೇಟಿಯಾಗಲು ಪ್ರಯತ್ನಿಸಿದ್ದರು. ನಿಯಮ ಉಲ್ಲಂಘನೆ ಕಾರಣ ಇವರಿಗೆ ಎರಡು ವಾರಗಳ ಜೈಲು ವಾಸ ವಿಧಿಸಲಾಯಿತು.

ADVERTISEMENT

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ಜಸ್ವೇಂದರ್ ಕೌರ್ ಅವರು ‘ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಇಂಥ ನಿರ್ಬಂಧಗಳು ಅವಶ್ಯಕವಾಗಿವೆ‘ ಎಂದು ಹೇಳಿದರು. ‘ಸೋಂಕು ಹರಡುವುದನ್ನು ತಡೆಗಟ್ಟುವುದಕ್ಕಾಗಿ ಸಂಬಂಧಿಗಳಿಗೂ ಅಡ್ಡಿಪಡಿಸುವುದು ಅನಿವಾರ್ಯವಾಗಿದೆ. ಇದಕ್ಕೆ ಎಲ್ಲರಿಂದ ತ್ಯಾಗ ಮತ್ತು ತಾಳ್ಮೆ ಅಗತ್ಯವಾಗಿದೆ‘ ಎಂದು ನ್ಯಾಯಾಧೀಶ ಕೌರ್‌ ಅವರ ಹೇಳಿಕೆಯನ್ನು ಸ್ಥಳೀಯ ಸುದ್ದಿ ವಾಹಿನಿ ವರದಿಯಲ್ಲಿ ಉಲ್ಲೇಖಿಸಿದೆ.

ಈ ದಂಪತಿ ತಾವು ಮಾಡಿದ್ದು ತಪ್ಪು ಎಂದು ಒಪ್ಪಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.