ADVERTISEMENT

ಗಲ್ಫ್‌ ವಿಮಾನದಲ್ಲಿ ತಾಂತ್ರಿಕ ದೋಷ; ಭಾರತದ ಪ್ರಯಾಣಿಕರಿಗೆ 20 ಗಂಟೆ ಸಂಕಷ್ಟ

ಪಿಟಿಐ
Published 2 ಡಿಸೆಂಬರ್ 2024, 13:20 IST
Last Updated 2 ಡಿಸೆಂಬರ್ 2024, 13:20 IST
<div class="paragraphs"><p>ಕುವೈತ್‌ ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದ ಭಾರತೀಯ ಪ್ರಯಾಣಿಕರ ಜೊತೆ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ ಮಾತುಕತೆ ನಡೆಸಿದರು</p></div>

ಕುವೈತ್‌ ವಿಮಾನ ನಿಲ್ದಾಣದಲ್ಲಿ ಸಿಲುಕಿದ್ದ ಭಾರತೀಯ ಪ್ರಯಾಣಿಕರ ಜೊತೆ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿ ಮಾತುಕತೆ ನಡೆಸಿದರು

   

– ‘ಎಕ್ಸ್‌’ ಚಿತ್ರ

ಕುವೈತ್‌ ಸಿಟಿ: ಮ್ಯಾಂಚೆಸ್ಟರ್‌ಗೆ ತೆರಳುತ್ತಿದ್ದ ಗಲ್ಫ್‌ ಏರ್‌ಲೈನ್ಸ್‌ನ ವಿಮಾನವೊಂದು ಕುವೈತ್‌ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದರಿಂದ‌ ಅದರಲ್ಲಿದ್ದ ಭಾರತದ ಪ್ರಯಾಣಿಕರು ಸೋಮವಾರ 20 ತಾಸು ಸಂಕಷ್ಟಕ್ಕೆ ಸಿಲುಕಿದರು.

ADVERTISEMENT

ಬಹರೇನ್‌ನಿಂದ ಗಲ್ಫ್‌ ಏರ್‌– ಜಿಎಫ್‌5 ವಿಮಾನವು ಡಿ.1ರಂದು ಬೆಳಿಗ್ಗೆ 2.05 ನಿಮಿಷಕ್ಕೆ ಮ್ಯಾಂಚೆಸ್ಟರ್‌ಗೆ ಹೊರಟಿತ್ತು. ತಾಂತ್ರಿಕ ದೋಷದಿಂದಾಗಿ ಬೆಳಿಗ್ಗೆ 4.01ರ ವೇಳೆ ಕುವೈತ್‌ನಲ್ಲಿ ಇಳಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ. 

‘ಹಲವು ಗಂಟೆಗಳಿಂದ ವಿಮಾನವು ನಿಲ್ದಾಣದಲ್ಲಿಯೇ ಇದೆ. ಅಗತ್ಯ ವ್ಯವಸ್ಥೆ ಮಾಡಿಲ್ಲ. ಭಾರತದ ರಾಯಭಾರ ಕಚೇರಿಯು ಕೂಡಲೇ ನೆರವಿಗೆ ಧಾವಿಸಬೇಕು’ ಎಂದು ಭಾರತೀಯ ಪ್ರಯಾಣಿಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ಮನವಿ ಮಾಡಿದ್ದರು.

‘ತಕ್ಷಣವೇ ಎಚ್ಚೆತ್ತ ರಾಯಭಾರ ಕಚೇರಿಯ ಸಿಬ್ಬಂದಿ ವಿಮಾನ ನಿಲ್ದಾಣಕ್ಕೆ ತೆರಳಿ ಪ್ರಯಾಣಿಕರಿಗೆ ಸಹಾಯ ಮಾಡುವ ಜೊತೆಗೆ ವಿಮಾನಯಾನ ಸಿಬ್ಬಂದಿಯೊಡನೆ ಸಮನ್ವಯ ಸಾಧಿಸಿದರು. ನಿಲ್ದಾಣದಲ್ಲಿದ್ದ ಎರಡು ಲಾಂಜ್‌ಗಳಲ್ಲಿ ಆಹಾರ ಹಾಗೂ ನೀರಿನ ವ್ಯವಸ್ಥೆ ಮಾಡಲಾಯಿತು’ ಎಂದು ಇಲ್ಲಿನ ರಾಯಭಾರ ಕಚೇರಿಯಯು ‘ಎಕ್ಸ್’ನಲ್ಲಿ ತಿಳಿಸಿದೆ.

ವಿಮಾನವು ಸೋಮವಾರ ಬೆಳಿಗ್ಗೆ 4.30ರ ವೇಳೆಗೆ ಮ್ಯಾಂಚೆಸ್ಟರ್‌ಗೆ ತೆರಳಿತು. ವಿಮಾನ ಹೊರಡುವವರೆಗೆ ರಾಯಭಾರ ಕಚೇರಿಯ ಸಿಬ್ಬಂದಿಯೇ ಅಲ್ಲಿಯೇ ನಿಂತು, ನೆರವು ನೀಡಿದರು ಎಂದು ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ.

ಆಗಿದ್ದೇನು?

‘ಕುವೈತ್‌ನಲ್ಲಿ ವಿಮಾನವು ಕೆಳಗಿಳಿದ ವೇಳೆ ಭಾರತದ ಪ್ರಯಾಣಿಕರನ್ನು ಹೊರತುಪಡಿಸಿ ಉಳಿದವರಿಗೆ ಅಗತ್ಯ ನೆರವು ನೀಡಲಾಯಿತು. ಲಾಂಜ್‌ ಪ್ರವೇಶಕ್ಕೂ ಅವಕಾಶ ನೀಡಿರಲಿಲ್ಲ’ ಎಂದು ಸಂಕಷ್ಟಕ್ಕೆ ಸಿಲುಕಿದ್ದ ಭಾರತದ ಪ್ರಯಾಣಿಕರೊಬ್ಬರು ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದರು.   ‘ಭಾರತ ಹಾಗೂ ಪಾಕಿಸ್ತಾನೀಯರು ಟ್ರಾನ್ಸಿಟ್‌ ವೀಸಾ ಹೊಂದಿದ್ದರೆ ಮಾತ್ರ ಹೋಟೆಲ್‌ನ ಒಳಗೆ ಪ್ರವೇಶ ನೀಡಲಾಗುವುದು ಎಂದು ತಿಳಿಸಿದರು. ದಾಖಲೆಗಳ ಸಮೇತ ಅವರ ಹಿಂದೆ ಎರಡು ಗಂಟೆ ತಿರುಗಾಡಿದದ ಮೇಲೆ ಲಾಂಜ್‌ ಪ್ರವೇಶಿಸಲು ಅವಕಾಶ ನೀಡಿದರು. ಮೊದಲ ನಾಲ್ಕು ಗಂಟೆಗಳ ಕಾಲ ಕುಡಿಯುವ ನೀರು ಕೂಡ ನೀಡಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.