ADVERTISEMENT

ಭಾರತೀಯ ಮಹಿಳೆಗೆ 'ಸಾರ್ಸ್' ಸೋಂಕು

ಪಿಟಿಐ
Published 19 ಜನವರಿ 2020, 20:09 IST
Last Updated 19 ಜನವರಿ 2020, 20:09 IST
ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳಲ್ಲಿ ಮುಂಜಾಗ್ರತೆ ವಹಿಸಲಾಗಿದೆ
ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳಲ್ಲಿ ಮುಂಜಾಗ್ರತೆ ವಹಿಸಲಾಗಿದೆ   

ಬೀಜಿಂಗ್: ಶೆನ್‌ಜೆನ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ಶಿಕ್ಷಕಿಯೊಬ್ಬರಿಗೆ ‘ಸಾರ್ಸ್’ ಸೋಂಕು ತಗುಲಿದ್ದು, ಅವರ ಗಂಟಲಿನಲ್ಲಿ ಹುಣ್ಣುಗಳು ಕಾಣಿಸಿಕೊಂಡಿವೆ. ‘ಕೊರೊನಾ ವೈರಸ್‌’ ಕುಟುಂಬಕ್ಕೆ ಸೇರಿದ ರೋಗಾಣುವಿನಿಂದ ಉಂಟಾದ ಸೋಂಕು ಇದಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರೀತಿ ಮಹೇಶ್ವರಿ ಎಂಬುವವರು ಇಲ್ಲಿನ ಅಂತರರಾಷ್ಟ್ರೀಯ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಇದುವರೆಗೂ ಚೀನಾದಲ್ಲಿ ಆರು ಮಂದಿಗೆ ಸೋಂಕು ತಗುಲಿದೆ.ವುಹಾನ್‌ನಲ್ಲಿ ಒಬ್ಬ ನಾಗರಿಕ ಮೃತಪಟ್ಟಿದ್ದಾನೆ. ವೈರಸ್‌ಗೆ ತುತ್ತಾಗಿದ್ದ ಹಲವು ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಆದರೆ, ಆತಂಕ ಅಲ್ಲಿ ಇನ್ನೂ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT