ADVERTISEMENT

ಲಂಡನ್‌: ಮಧುಮೇಹ ಕೋರ್ಸ್‌ಗೆ ಭಾರತದ 100 ವಿದ್ಯಾರ್ಥಿಗಳು ದಾಖಲು

ಪಿಟಿಐ
Published 3 ಅಕ್ಟೋಬರ್ 2020, 13:57 IST
Last Updated 3 ಅಕ್ಟೋಬರ್ 2020, 13:57 IST

ಲಂಡನ್‌: ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಂ ಸಿಟಿ ವಿಶ್ವವಿದ್ಯಾಲಯವು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿಹೊಸದಾಗಿ ಆರಂಭಿಸಿರುವ ಮಧುಮೇಹ ಕುರಿತಾದ ಆನ್‌ಲೈನ್‌ ಕೋರ್ಸ್‌ಗೆ ಭಾರತದ ಸುಮಾರು 100 ಮಂದಿ ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಬರ್ಮಿಂಗ್‌ಹ್ಯಾಂ ವಿಶ್ವವಿದ್ಯಾಲಯವು ಯೂನಿವರ್ಸಿಟಿ ಹಾಸ್ಪಿಟಲ್ಸ್‌ ಬರ್ಮಿಂಗ್‌ಹ್ಯಾಂ ಡಯಾಬಿಟಿಸ್‌ ಟೀಮ್‌ ಸಹಯೋಗದಲ್ಲಿ ‘ಅಡ್ವಾನ್ಸಿಂಗ್‌ ಡಯಾಬಿಟಿಸ್‌ ಕೇರ್‌’ ಎಂಬ ಕೋರ್ಸ್‌ ಆರಂಭಿಸಿದೆ.ಈ ಕೋರ್ಸ್‌ಗೆ ದಾಖಲಾಗಿರುವ ಭಾರತದ ವಿದ್ಯಾರ್ಥಿಗಳಿಗೆ ಮುಂಬೈನ ಲುಪಿನ್‌ ಫಾರ್ಮಾಸ್ಯುಟಿಕಲ್ ಸಂಸ್ಥೆಯು‌ ಪ್ರಾಯೋಜಕತ್ವ ನೀಡುತ್ತಿದೆ.

‘ಪ್ರಸ್ತುತ ದಿನಗಳಲ್ಲಿ ಎಲ್ಲಾ ವರ್ಗ ಹಾಗೂ ವಯೋಮಾನದವರು ಮಧುಮೇಹದಿಂದ ಬಳಲುತ್ತಿರುವುದನ್ನು ನಾವು ಗಮನಿಸಿದ್ದೇವೆ. ಮಧುಮೇಹದ ಕುರಿತು ಆಳವಾದ ಅಧ್ಯಯನ ನಡೆಸಲು ಹೊಸದಾಗಿ ಶುರುಮಾಡಿರುವ ಎಂಎಸ್ಸಿ ಕೋರ್ಸ್‌ ಸಹಕಾರಿಯಾಗಲಿದೆ’ ಎಂದು ಭಾರತದ ಕೌನ್ಸಲ್‌ ಜನರಲ್‌ ಶಶಾಂಕ್‌‌ ವಿಕ್ರಂ ತಿಳಿಸಿದ್ದಾರೆ.

ADVERTISEMENT

ಭಾರತದಲ್ಲಿ ಸುಮಾರು 7.7 ಕೋಟಿ ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ. ಕೋವಿಡ್‌ನಿಂದ ಸತ್ತವರ ಪೈಕಿ ಬಹುತೇಕರು ಮಧುಮೇಹದಿಂದ ಬಳಲುತ್ತಿದ್ದರು ಎಂಬುದೂ ದೃಢಪಟ್ಟಿದೆ ಎಂದು ವಿಶ್ವವಿದ್ಯಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.