ಸಿಂಗಪುರ: ಮಹಿಳಾ ಆರೋಪಿಯನ್ನು‘ಲೈಂಗಿಕ ಸಹಕಾರ’ಕ್ಕಾಗಿ ಪೀಡಿಸಿದ ಭಾರತೀಯ ಮೂಲದ ಸಿಂಗಪುರದ ಪೊಲೀಸ್ ಅಧಿಕಾರಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಲೈಗಿಂಕ ಸಹಕಾರ ಪ್ರಕರಣ ಸೇರಿದಂತೆ ಸಿಂಗಪುರ ಪೊಲೀಸ್ ಪಡೆಯ ಸ್ಟಾಫ್ ಸಾರ್ಜೆಂಟ್ ಆಗಿರುವ ಮಹೇಂದ್ರನ್ ಸೆಲ್ವರಾಜು(32) ವಿರುದ್ಧದ ಒಟ್ಟು ನಾಲ್ಕುಆರೋಪ ಸಾಬೀತಾಗಿವೆ.
ಅಂಗಡಿಯೊಂದರಲ್ಲಿ ನಡೆದ ದರೋಡೆ ಮತ್ತು ಕ್ರೆಡಿಟ್ ಕಾರ್ಡ್ ವಂಚನೆಗ ಪ್ರಕರಣದ ತನಿಖೆ ನೆಪದಲ್ಲಿಮಹೇಂದ್ರನ್, ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಲೈಂಗಿಕ ಸಹಕಾರಕ್ಕಾಗಿ ಪೀಡಿಸುತ್ತಿದ್ದ. ಸಹಕಾರ ನೀಡಿದರೆ ಪ್ರಕರಣದಿಂದ ಪಾರು ಮಾಡುವ ಭರವಸೆ ನೀಡಿದ್ದ.ಈ ಸಂಬಂಧ ಮಹಿಳೆ ಮಹೇಂದ್ರನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
ಇದಲ್ಲದೇ ಇನ್ನೂ ಮತ್ತೊಂದು ಪ್ರಕರಣದಲ್ಲಿ ಮಹೇಂದ್ರ, ತನಿಖೆ ನಡೆಸುವ ನೆಪದಲ್ಲಿ ಮಹಿಳೆಯೊಬ್ಬರ ತೀರಾ ವೈಯಕ್ತಿಕವಾದ ವಿಡಿಯೊಗಳನ್ನು ಅವರ ಕಂಪ್ಯೂಟರ್‌ನಿಂದ ಕಾಪಿ ಮಾಡಿಕೊಂಡಿದ್ದ. ಈ ಎಲ್ಲ ದೂರುಗಳ ಹಿನ್ನೆಲೆಯಲ್ಲಿ ಮೇ 1 ರಂದು ಭ್ರಷ್ಟಾಚಾರ ನಿಗ್ರಹ ತನಿಖಾ ಸಂಸ್ಥೆ (ಸಿಬಿಐಬಿ) ಮಹೇಂದ್ರನನ್ನು ಬಂಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.