ADVERTISEMENT

ಜ್ಞಾನದಲ್ಲಿನ ಭಾರತದ ಹೂಡಿಕೆ ಇಂದು ಫಲ ನೀಡುತ್ತಿದೆ: ರಾಹುಲ್‌ ಗುಪ್ತಾ

ಪಿಟಿಐ
Published 16 ಆಗಸ್ಟ್ 2022, 14:24 IST
Last Updated 16 ಆಗಸ್ಟ್ 2022, 14:24 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್: ‘1947ರ ಬಳಿಕ ಶಿಕ್ಷಣ ಮತ್ತು ಜ್ಞಾನ ಕ್ಷೇತ್ರದಲ್ಲಿ ಭಾರತ ಮಾಡಿದ ಹೂಡಿಕೆಗೆ ಇದೀಗ ಫಲ ಸಿಗುತ್ತಿದೆ’ ಎಂದು ಅಮೆರಿಕದ ಉನ್ನತ ಔಷಧ ನೀತಿ ಅಧಿಕಾರಿ ಡಾ.ರಾಹುಲ್ ಗುಪ್ತಾ ಹೇಳಿದ್ದಾರೆ.

ಶ್ವೇತಭವನದ ರಾಷ್ಟ್ರೀಯ ಔಷಧ ನಿಯಂತ್ರಣ ನೀತಿಯ (ಒಎನ್‌ಡಿಸಿಪಿ) ಕಚೇರಿಯನ್ನು ಮುನ್ನಡೆಸಿದ ಭಾರತ ಮೂಲದ ವ್ಯಕ್ತಿ ಎಂಬ ಹೆಗ್ಗಳಿಕೆ ಗುಪ್ತಾ ಅವರದು. ಭಾರತದಲ್ಲಿ ತಮ್ಮ ಪೋಷಕರು ಉತ್ತಮ ಶಿಕ್ಷಣ ನೀಡಿದ್ದರಿಂದಲೇ ತಮಗೆ ಈ ಹುದ್ದೆಗೆ ಏರುವುದು ಸಾಧ್ಯವಾಯಿತು ಎಂದು ನೆನಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT