ADVERTISEMENT

ಇಂಡೋನೇಷ್ಯಾದಲ್ಲಿ ಕಮರಿಗೆ ಬಿದ್ದ ಬಸ್‌: 27 ಸಾವು

ಏಜೆನ್ಸೀಸ್
Published 11 ಮಾರ್ಚ್ 2021, 5:54 IST
Last Updated 11 ಮಾರ್ಚ್ 2021, 5:54 IST
ಬಸ್‌ನೊಳಗಿನಿಂದ ಗಾಯಾಳುಗಳನ್ನು ಹೊರಗೆ ತೆಗೆಯುವ ಕಾರ್ಯಾಚರಣೆ ನಡೆಯಿತು
ಬಸ್‌ನೊಳಗಿನಿಂದ ಗಾಯಾಳುಗಳನ್ನು ಹೊರಗೆ ತೆಗೆಯುವ ಕಾರ್ಯಾಚರಣೆ ನಡೆಯಿತು   

ಜಕಾರ್ತ: ಇಂಡೋನೇಷ್ಯಾದ ಮುಖ್ಯ ದ್ವೀಪವಾಗಿರುವ ಜಾವಾದಲ್ಲಿ ಗುರುವಾರ ಬಸ್ಸೊಂದು 20 ಮೀಟರ್‌ ಆಳದ ಕಮರಿಗೆ ಬಿದ್ದುದರಿಂದ 27 ಮಂದಿ ಮೃತಪಟ್ಟಿದ್ದು, ಇತರ 39 ಮಂದಿ ಗಾಯಗೊಂಡಿದ್ದಾರೆ.

ಪಶ್ಚಿಮ ಜಾವಾ ‍ಪ್ರಾಂತ್ಯದ ತಾಸಿಕ್‌ಮಲಯ ಜಿಲ್ಲೆಯ ಯಾತ್ರಾಸ್ಥಳವೊಂದಕ್ಕೆ ತೆರಳಿ ಸುಬಾಂಗ್‌ ನಗರಕ್ಕೆ ಬಸ್‌ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿತು. ಬಸ್‌ನಲ್ಲಿ ಇಸ್ಲಾಮಿಕ್‌ ಜ್ಯೂನಿಯರ್‌ ಹೈಸ್ಕೂಲ್‌ ವಿದ್ಯಾ‌ರ್ಥಿಗಳಿದ್ದರು ಎಂಧು ಪೊಲೀಸರು ತಿಳಿಸಿದ್ದಾರೆ.

ಇಂಡೋನೇಷ್ಯಾದಲ್ಲಿ ಆಗಾಗ ರಸ್ತೆ ಅಪಘಾತಗಳು ಸಂಭವಿಸಲು ವಾಹನಗಳ ಕಳಪೆ ನಿರ್ವಹಣೆ ಮತ್ತು ಸಮರ್ಪಕ ರಸ್ತೆಗಳು ಇಲ್ಲದಿರುವುದೇ ಕಾರಣ ಎಂದು ಹೇಳಲಾಗುತ್ತಿದೆ. 2019ರ ಡಿಸೆಂಬರ್‌ನಲ್ಲಿ ಸುಮಾತ್ರಾ ದ್ವೀಪದಲ್ಲಿ 80 ಮೀಟರ್ ಆಳದ ಕಮರಿಗೆ ಬಸ್‌ ಬಿದ್ದು 35 ಮಂದಿ ಮೃತಪಟ್ಟಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.