ADVERTISEMENT

Indonesia Floods | ಇಂಡೊನೇಷ್ಯಾದಲ್ಲಿ ಪ್ರವಾಹ: 11 ಸಾವು,13 ಮಂದಿ ನಾಪತ್ತೆ 

ಏಜೆನ್ಸೀಸ್
Published 10 ಸೆಪ್ಟೆಂಬರ್ 2025, 15:20 IST
Last Updated 10 ಸೆಪ್ಟೆಂಬರ್ 2025, 15:20 IST
<div class="paragraphs"><p>ಬಾಲಿಯ&nbsp;ಡೆನ್ಪಸಾರ್‌ನಲ್ಲಿ ಪ್ರವಾಹದಿಂದ ಹಾನಿಗೀಡಾಗಿರುವ ಮನೆಗಳು</p></div>

ಬಾಲಿಯ ಡೆನ್ಪಸಾರ್‌ನಲ್ಲಿ ಪ್ರವಾಹದಿಂದ ಹಾನಿಗೀಡಾಗಿರುವ ಮನೆಗಳು

   

ಡೆನ್ಪಸಾರ್‌ (ಇಂಡೊನೇಷ್ಯಾ): ದ್ವೀಪರಾಷ್ಟ್ರ ಇಂಡೊನೇಷ್ಯಾದ ಎರಡು ಪ್ರಾಂತ್ಯಗಳಲ್ಲಿ ಬುಧವಾರ ಪ್ರವಾಹ ಸಂಭವಿಸಿ 11 ಮಂದಿ ಮೃತಪಟ್ಟಿದ್ದಾರೆ, 13 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ.  

ಈಸ್ಟ್‌ ನುಸಾ ಟೆಂಗಾರ ಪ್ರಾಂತ್ಯ ಹಾಗೂ ಬಾಲಿಯಲ್ಲಿ ಸೋಮವಾರದಿಂದಲೂ ಧಾರಾಕಾರ ಮಳೆಯಾಗುತ್ತಿದ್ದ ಪರಿಣಾಮ ಪ್ರವಾಹ ಕಂಡುಬಂದಿದೆ.

ADVERTISEMENT

ಬಾಲಿಯಲ್ಲಿ 8 ಮಂದಿ ಮೃತಪಟ್ಟಿದ್ದು, 8 ಮಂದಿ ನಾಪತ್ತೆಯಾಗಿದ್ದರೆ, ಟೆಂಗಾರದಲ್ಲಿ 3 ಮಂದಿ ಮೃತಪಟ್ಟಿದ್ದು, 5 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಇನ್ನು ಪ್ರವಾಹದ ಅಬ್ಬರಕ್ಕೆ ಬಾಲಿಯಲ್ಲಿ 9 ಜಿಲ್ಲೆಗಳು ತತ್ತರಿಸಿದ್ದು, ಪ್ರವಾಸಿ ತಾಣಗಳು ಹಾಗೂ ವಸತಿ ಪ್ರದೇಶಗಳಲ್ಲಿ ಸಾವಿರಾರು ಮನೆಗಳು, ಕಟ್ಟಡಗಳು ಜಲಾವೃತಗೊಂಡಿವೆ. ವಿವಿಧ ಪ್ರದೇಶಗಳಲ್ಲಿ ಭೂ ಕುಸಿತ ಸಂಭವಿಸಿ ಹಲವು ರಸ್ತೆಗಳು, ಸೇತುವೆಗಳು ಕೂಡ ಹಾನಿಗೀಡಾಗಿವೆ.

800ಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿ ತಾತ್ಕಾಲಿಕ ವಸತಿ ಕಲ್ಪಿಸಲಾಗಿದೆ. ರಸ್ತೆ ಬದಿಯ ವಾಹನಗಳು ಕೊಚ್ಚಿ ಹೋಗಿದ್ದು, ಸರ್ಕಾರಿ ಕಚೇರಿಗಳು, ಭತ್ತದ ಗದ್ದೆಗಳು, ತೋಟಗಳು ಜಲಾವೃತಗೊಂಡು ಅಪಾರ ಪ್ರಮಾಣದ ಆಸ್ತಿ ನಾಶವಾಗಿದೆ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.