ADVERTISEMENT

ಇಂಡೊನೇಷ್ಯಾ ಹಡಗಿನಲ್ಲಿ ಬೆಂಕಿ

ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಏಜೆನ್ಸೀಸ್
Published 16 ನವೆಂಬರ್ 2022, 13:39 IST
Last Updated 16 ನವೆಂಬರ್ 2022, 13:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನುಸಾ ದುವ: 271 ಮಂದಿ ಇದ್ದ ಪ್ರಯಾಣಿಕ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಇಂಡೊನೇಷ್ಯಾದ ಬಾಲಿ ಸಮೀಪ ಬುಧವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾವುದೇ ಹಾನಿಯಾದ ಬಗ್ಗೆತತ್‌ಕ್ಷಣಕ್ಕೆ ವರದಿಯಾಗಿಲ್ಲ. ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕಾರ್ಯಾಚರಣೆ ಪ್ರಗತಿಯಲ್ಲಿದೆ.ರಕ್ಷಣಾ ಪಡೆಗಳ ಸಿಬ್ಬಂದಿ, ನಾವಿಕರು, ಸ್ಥಳೀಯ ಮೀನುಗಾರರು ಹಡಗಿನಲ್ಲಿ ಸಿಲುಕಿರುವ ಪ್ರಯಾಣಿಕರನ್ನು ರಕ್ಷಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

‘ಮುತಿಯಾರಾ ತೈಮೂರ್‌– 1’ ಹೆಸರಿನ ಹಡಗು ಲೆಂಬರ್‌ ಬಂದರಿನಿಂದ ಬಾಲಿ ಜಲಸಂಧಿ ಮೂಲಕ ಪೂರ್ವ ಜಾವಾದ ಕೆಟಪಂಗ್‌ ನಗರದ ಕಡೆಗೆ ಸಾಗುತ್ತಿದ್ದ ಸಂದರ್ಭದಲ್ಲಿ ಅಗ್ನಿ ಅವಘಡಕ್ಕೆ ತುತ್ತಾಗಿದೆ. ಈ ವೇಳೆ 236 ಪ್ರಯಾಣಿಕರು ಮತ್ತು 35 ಸಿಬ್ಬಂದಿ ಹಡಗಿನಲ್ಲಿ ಇದ್ದರು.

ADVERTISEMENT

ಅತಿಯಾದ ಪ್ರಯಾಣಿಕರು ಮತ್ತು ಕಳಪೆ ಸುರಕ್ಷತಾ ಮಾನದಂಡಗಳಿಂದಾಗಿ ಇಲ್ಲಿ ಆಗಾಗ ಇಂಥ ಅವಘಡಗಳು ಸಂಭವಿಸುತ್ತವೆ. 2018ರಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ತುಂಬಿದ್ದ ಹಡಗೊಂಡು ಮುಳುಗಿ 167 ಮಂದಿ ಮೃತಪಟ್ಟಿದ್ದರು. 1999ರಲ್ಲೂ ಇಂಥದ್ದೇ ಘಟನೆಯಲ್ಲಿ 312 ಮಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.