ADVERTISEMENT

ಇಂಡೊನೇಷ್ಯಾ: ಪತನಗೊಂಡ ವಿಮಾನದ ಕಾಕ್‌ಪಿಟ್‌ಗೆ ಶೋಧ

ಏಜೆನ್ಸೀಸ್
Published 13 ಜನವರಿ 2021, 8:28 IST
Last Updated 13 ಜನವರಿ 2021, 8:28 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜಕಾರ್ತ: ಸಮುದ್ರದಲ್ಲಿ ಇತ್ತೀಚೆಗೆ ಪತನಗೊಂಡಿರುವ ಇಂಡೊನೇಷ್ಯಾದ ಶ್ರೀವಿಜಯ ಏರ್‌ಗೆ ಸೇರಿದ ವಿಮಾನದ ಕಾಕ್‌ಪಿಟ್‌ ಸಾಧನವನ್ನು ಪತ್ತೆ ಹಚ್ಚುವ ಕಾರ್ಯವನ್ನು ಬುಧವಾರ ಕೈಗೊಳ್ಳಲಾಗಿದೆ.

ವಿಮಾನದ ಅವಶೇಷಗಳ ನಡುವೆ ಈ ಸಾಧನ ಪತ್ತೆಗಾಗಿ ನೌಕಾಪಡೆಯ ಮುಳುಗುತಜ್ಞರು ಪ್ರಯತ್ನ ಮುಂದುವರಿಸಿದ್ದಾರೆ.

ಮಂಗಳವಾರ ನಡೆದ ಕಾರ್ಯಾಚರಣೆಯಲ್ಲಿ ಮುಳುಗುತಜ್ಞರು ಡೇಟಾ ರೆಕಾರ್ಡರ್‌ ಸಾಧನವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

ಕಳೆದ ಶನಿವಾರ ಇಲ್ಲಿನ ವಿಮಾನನಿಲ್ದಾಣದಿಂದ ಸಂಸ್ಥೆಯ ವಿಮಾನ (ಬೋಯಿಂಗ್‌ 737–500) ಟೇಕಾಫ್‌ ಆದ ಕೆಲ ನಿಮಿಷಗಳ ನಂತರ ಜಾವಾ ಸಮುದ್ರದಲ್ಲಿ ಪತನವಾಗಿತ್ತು. ಈ ವಿಮಾನದಲ್ಲಿ ಸಿಬ್ಬಂದಿ ಸೇರಿ 62 ಜನರು ಪ್ರಯಾಣಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.