ADVERTISEMENT

ಜನರು ವಿದೇಶಗಳಿಗೆ ಹೋಗಲು ಸೌಲಭ್ಯ ಕಲ್ಪಿಸಿ: ಅಫ್ಗಾನ್ ನಾಯಕರಿಗೆ ವಿಶ್ವಸಮುದಾಯ ಕರೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2021, 16:44 IST
Last Updated 16 ಆಗಸ್ಟ್ 2021, 16:44 IST
   

ಕಾಬೂಲ್:‌ಅಫ್ಗಾನಿಸ್ತಾನದಲ್ಲಿರುವ ರಾಜಕೀಯ ಪಕ್ಷಗಳುವಿದೇಶಿಯರು ಮತ್ತು ದೇಶ ತೊರೆಯಲು ಬಯಸುವ ಅಫ್ಗಾನ್‌ ಪ್ರಜೆಗಳು ಸುರಕ್ಷಿತ, ಕ್ರಮಬದ್ಧ ಮತ್ತು ಗೌರವಯುತವಾಗಿ ಪ್ರಯಾಣಿಸಲುಸೌಲಭ್ಯ ಕಲ್ಪಿಸಬೇಕು ಎಂದು ವಿಶ್ವ ಸಮುದಾಯ ಆಗ್ರಹಿಸಿದೆ.

ಈ ಸಂಬಂಧಅಂತರರಾಷ್ಟ್ರೀಯ ಸಮುದಾಯ ಬಿಡುಗಡೆ ಮಾಡಿರುವಪ್ರಕಟಣೆಯಲ್ಲಿ, ವಿದೇಶಗಳಿಗೆ ತೆರಳಲು ಬಯಸುವ ಅಫ್ಗಾನಿಸ್ತಾನ ಮತ್ತು ವಿದೇಶಗಳ ನಾಗರಿಕರಿಗೆ ಅವಕಾಶ ಕಲ್ಪಿಸಬೇಕು. ರಸ್ತೆ, ವಿಮಾನ ನಿಲ್ದಾಣಗಳು ಮತ್ತು ಗಡಿದಾಟುವಿಕೆಯುಮುಕ್ತ ಮತ್ತು ಶಾಂತಿಯುತವಾಗಿರಬೇಕು ಎಂದು ಕೋರಲಾಗಿದೆ.

ʼಅಫ್ಗಾನ್‌ ಜನರು ಸುರಕ್ಷಿತ, ಭದ್ರತೆ ಮತ್ತು ಘನತೆಯಿಂದಬದುಕಲು ಅರ್ಹರು. ಅಂತರರಾಷ್ಟ್ರೀಯ‌ ಸಮುದಾಯವಾಗಿ ನಾವು ಎಲ್ಲ ರೀತಿಯ ನೆರವು ನೀಡಲು ಸಿದ್ಧರಿದ್ದೇವೆʼ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ಅಲ್ಬೇನಿಯಾ, ಆಸ್ಟ್ರೇಲಿಯಾ, ಆಸ್ಟ್ರಿಯಾ, ಬಹಮಾಸ್‌, ಬೆಲ್ಜಿಯಂ, ಬುರ್ಕಿನಾ ಫಾಸೊ, ಕೆನಡಾ, ಚಿಲಿ, ಕೊಲಂಬಿಯಾ, ಕೊಸ್ಟರಿಕಾ, ಕ್ರೊವೇಷಿಯಾ, ಚೆಕ್‌ ಗಣರಾಜ್ಯ, ಡೆನ್ಮಾರ್ಕ್‌, ಡೊಮೆನಿಕಾ, ಫಿಜಿ, ಫಿನ್‌ಲ್ಯಾಂಡ್‌, ಫ್ರಾನ್ಸ್‌, ಜಾರ್ಜಿಯಾ, ಜರ್ಮನಿ, ಘಾನಾ, ಗ್ರೀಸ್‌, ಹೈಟಿ ಸೇರಿದಂತೆ ಇನ್ನೂ ಹಲವು ದೇಶಗಳು ಒಟ್ಟಾಗಿ ಈ ಹೇಳಿಕೆ ಬಿಡುಗಡೆ ಮಾಡಿವೆ.

ತಾಲಿಬಾನ್‌ಸಂಘಟನೆ ಇದೀಗ ಅಫ್ಗಾನಿಸ್ತಾನವನ್ನು ವಶಕ್ಕೆ ತೆಗೆದುಕೊಂಡಿದೆ. ಹೀಗಾಗಿ ಜನರು ದೇಶ ತೊರೆಯಲು ಮುಂದಾಗಿದ್ದಾರೆ.

ಕಾಬೂಲ್‌ನಿಂದ ಅಮೆರಿಕಕ್ಕೆ ತೆರಳುತ್ತಿದ್ದ ಬೋಯಿಂಗ್‌ ಸಿ-17 ಗ್ಲೋಬ್‌ಮಾಸ್ಟರ್‌ ವಿಮಾನದ ಚಕ್ರಗಳನ್ನು ಹಿಡಿದು ಕುಳಿತಿದ್ದ ಮೂವರು, ವಿಮಾನ ಹಾರುತ್ತಿದ್ದಾಗ ಕೆಳಗೆ ಬಿದ್ದು ಸಾವಿಗೀಡಾಗಿದ್ದಾರೆ. ವಿಮಾನದಲ್ಲಿ ಸ್ಥಳಾವಾಕಾಶ ಇಲ್ಲದ್ದರಿಂದ ಅವರು ಚಕ್ರದ ಬಳಿ ಕುಳಿತಿದ್ದರು ಎಂದು ವರದಿಯಾಗಿದೆ.

ಅದಕ್ಕೂ ಮೊದಲು ವಿಮಾನ ನಿಲ್ದಾಣದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿ ವೇಳೆ ಕನಿಷ್ಠ ಮೂವರು ಪ್ರಯಾಣಿಕರು ಮೃತಪಟ್ಟಿದ್ದರು.

ತಾಲಿಬಾನ್ ಉಗ್ರರು ಕಾಬೂಲ್‌ ಪ್ರವೇಶಿಸುತ್ತಿದ್ದಂತೆಯೇಅಫ್ಗಾನ್‌ ಅಧ್ಯಕ್ಷ‌ ಅಶ್ರಫ್‌ ಘನಿ ಭಾನುವಾರ ದೇಶ ತೊರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.