ADVERTISEMENT

ನೂತನ ಮುಖ್ಯಸ್ಥರ ಆಯ್ಕೆ: ಇಂಟರ್‌ಪೋಲ್‌ ಸಭೆ

ಏಜೆನ್ಸೀಸ್
Published 18 ನವೆಂಬರ್ 2018, 18:26 IST
Last Updated 18 ನವೆಂಬರ್ 2018, 18:26 IST

ದುಬೈ: ಇಂಟರ್‌ಪೋಲ್‌ನ ನೂತನ ಮುಖ್ಯಸ್ಥರ ಆಯ್ಕೆಗಾಗಿ ಭಾನುವಾರ ಇಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿವಿಧ ರಾಷ್ಟ್ರಗಳ ಪೊಲೀಸ್‌ ಮುಖ್ಯಸ್ಥರು ಪಾಲ್ಗೊಂಡಿದ್ದರು.

ಮಾಜಿ ಮುಖ್ಯಸ್ಥ ಮೆಂಗ್‌ ಹೊಂಗ್‌ವೀ ಅವರನ್ನು ಚೀನಾದಲ್ಲಿ ಬಂಧಿಸಿರುವ ಕಾರಣ ನೂತನ ಮುಖ್ಯಸ್ಥರ ಕುರಿತು ಚರ್ಚೆ ನಡೆಯಿತು.

ಚೀನಾದ ಸಾರ್ವಜನಿಕ ಭದ್ರತೆ ಇಲಾಖೆಯ ಉಪ ಸಚಿವರು ಕೂಡ ಆಗಿದ್ದ ಮೆಂಗ್‌ ಅವರು ಸೆಪ್ಟಂಬರ್‌ನಲ್ಲಿ ನಾಪತ್ತೆಯಾಗಿದ್ದರು.

ADVERTISEMENT

ಪ್ರಕರಣವೊಂದರ ವಿಚಾರಣೆಗಾಗಿ ಚೀನಾದ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ಅನಂತರ ತಿಳಿದು ಬಂದಿತ್ತು.

ಕೊಸೊವೊ ದೇಶಕ್ಕೆ ಸದಸ್ಯತ್ವ ನೀಡುವುದರ ಕುರಿತೂ ಸಭೆಯಲ್ಲಿ ಸದಸ್ಯ ರಾಷ್ಟ್ರಗಳು ಚರ್ಚೆ ನಡೆಸಿದವು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.