

ದುಬೈ: ‘ಇರಾನ್‌ನ ಪರಮೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯ ಬಳಿಕ ದೇಶದ ಹೊಸ ನಾಯಕತ್ವ ಮಂಡಳಿಯು ತನ್ನ ಕೆಲಸ ಆರಂಭಿಸಿದೆ’ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ತಿಳಿಸಿದ್ದಾರೆ.
ಮೊದಲೇ ರೆಕಾರ್ಡ್ ಮಾಡಿದ ಪೆಜೆಶ್ಕಿಯಾನ್ ಅವರ ಧ್ವನಿಯನ್ನು ಇರಾನ್‌ನ ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿಗಳು ಪ್ರಸಾರ ಮಾಡಿದವು.
ಸಮಿತಿಯಲ್ಲಿ ಪೆಜೆಶ್ಕಿಯಾನ್ ಸೇರಿದಂತೆ ಮೂವರಿದ್ದಾರೆ. ಮತ್ತಿಬ್ಬರು ನ್ಯಾಯಾಂಗ ಇಲಾಖೆಯ ಮುಖ್ಯಸ್ಥ ಗೊಲಮ್ ಹೊಸೈನ್ ಮೊಹ್‌ಸೆನಿ ಎಜೆಹೈ ಹಾಗೂ ಅಯತೊಲ್ಲಾ ಅಲಿ ರೆಜಾ ಅರಾಫಿ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.