ADVERTISEMENT

ಸೀಮಿತ ದಾಳಿಯೂ ಆಕ್ರಮಣಕಾರಿ ಕೃತ್ಯ: ಅಮೆರಿಕಕ್ಕೆ ಇರಾನ್‌ ಎಚ್ಚರಿಕೆ

ಏಜೆನ್ಸೀಸ್
Published 23 ಫೆಬ್ರುವರಿ 2026, 15:22 IST
Last Updated 23 ಫೆಬ್ರುವರಿ 2026, 15:22 IST
<div class="paragraphs"><p>ಟೆಹರಾನ್‌ನ ಶರೀಫ್‌ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಸ್ವಾತಂತ್ರ್ಯಕ್ಕಾಗಿ ಆಗ್ರಹಿಸಿ ಮಹಿಳೆಯರು ಸೋಮವಾರ ಪ್ರತಿಭಟನೆ ನಡೆಸಿದರು</p></div>

ಟೆಹರಾನ್‌ನ ಶರೀಫ್‌ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಸ್ವಾತಂತ್ರ್ಯಕ್ಕಾಗಿ ಆಗ್ರಹಿಸಿ ಮಹಿಳೆಯರು ಸೋಮವಾರ ಪ್ರತಿಭಟನೆ ನಡೆಸಿದರು

   

–ಎಎಫ್‌ಪಿ ಚಿತ್ರ

ಟೆಹರಾನ್‌: ‘ಇರಾನ್‌ ಮೇಲೆ ಅಮೆರಿಕವು ಸೀಮಿತ ದಾಳಿ ನಡೆಸಿದರೂ ಕೂಡ, ಆಕ್ರಮಣಕಾರಿ ಕೃತ್ಯವೆಂದೇ ಪರಿಗಣಿಸಲಾಗುತ್ತದೆ. ಅದು ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ’ ಎಂದು ಅಮೆರಿಕಕ್ಕೆ ಇರಾನ್‌ ಎಚ್ಚರಿಕೆ ನೀಡಿದೆ.

ADVERTISEMENT

‘ಇರಾನ್‌ ಮೇಲೆ ಸೀಮಿತ ದಾಳಿ ನಡೆಸಲಾಗುವುದು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಇತ್ತೀಚಿಗೆ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ, ಇರಾನ್‌ ತಿರುಗೇಟು ನೀಡಿದೆ.

‘ನೀವು ಕೇಳಿದ ಸೀಮಿತ ದಾಳಿಯ ಪ್ರಶ್ನೆಯನ್ನು ನಾವು ಗೌರವಿಸುತ್ತೇವೆ. ನನ್ನ ಪ್ರಕಾರ, ಸೀಮಿತ ದಾಳಿ ಎಂಬುದು ಇಲ್ಲ’ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಎಸಾಮೈಲ್‌ ಬಗೈ ತಿಳಿಸಿದ್ದಾರೆ. 

‘ಯಾವುದೇ ಮಾದರಿಯ ಸೀಮಿತ ದಾಳಿಯನ್ನು ಕೂಡ ಆಕ್ರಮಣಕಾರಿ ಕೃತ್ಯ ಎಂದೇ ಪರಿಗಣಿಸಲಾಗುತ್ತದೆ. ಇಂತಹ ದಾಳಿಗಳಿಗೆ ಆತ್ಮರಕ್ಷಣೆಯ ಅಂತರ್ಗತ ಭಾಗವಾಗಿ ಉಗ್ರವಾಗಿ ಪ್ರತಿಕ್ರಿಯೆ ನೀಡಲಾಗುತ್ತದೆ’ ಎಂದು ಈ ವೇಳೆ ಎಚ್ಚರಿಕೆ ನೀಡಿದ್ದಾರೆ.

ಟ್ರಂಪ್ ಹೇಳಿದ್ದೇನು?

‘ಇರಾನ್‌ ಜೊತೆಗೆ ಒಪ್ಪಂದ ನೆರವೇರದಿದ್ದರೆ, ಸೀಮಿತ ದಾಳಿ ನಡೆಸಲಾಗುವುದು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಕಳೆದ ಶುಕ್ರವಾರ ಹೇಳಿಕೆ ನೀಡಿದ್ದರು.‌

ಗುರುವಾರ ಮತ್ತೆ ಮಾತುಕತೆ ?

ಇರಾನ್‌ನ ಪರಮಾಣು ಕಾರ್ಯಕ್ರಮಗಳು ಒಮಾನ್‌ನ ಮಧ್ಯಸ್ಥಿಕೆಯಲ್ಲಿ ಪರೋಕ್ಷ ಮಾತುಕತೆ ಕಳೆದ ಮಂಗಳವಾರ ಸ್ವಿಟ್ಜರ್ಲೆಂಡ್ ನಡೆದಿತ್ತು. ಮತ್ತೊಂದು ಸುತ್ತಿನ ಮಾತುಕತೆ ಗುರುವಾರ ನಡೆಯಲಿದೆ ಎಂದು ಇರಾನ್‌ ಹಾಗೂ ಒಮಾನ್‌ ತಿಳಿಸಿದ್ದವು. ಆದರೆ ಅಮೆರಿಕ ಈ ಸಭೆಯಲ್ಲಿ ಭಾಗವಹಿಸುವ ಕುರಿತು ಖಚಿತತೆ ವ್ಯಕ್ತಪಡಿಸಿರಲಿಲ್ಲ. ಇರಾನ್‌ನ ಪರವಾಗಿ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ದೇಶದ ಪರವಾಗಿ ಸಂಧಾನ ನಡೆಸುತ್ತಿದ್ದು ಅಮೆರಿಕದ ಪರವಾಗಿ ಸ್ಟೀವ್‌ ವಿಟ್‌ಕೊಫ್‌ ಟ್ರಂಪ್‌ ಅಳಿಯ ಜೆರ್ಡ್‌ ಕುಶ್ನರ್‌ ಭಾಗಿಯಾಗಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.