
ಗಲ್ಲು
ಬಾಗ್ದಾದ್: 1980ರಲ್ಲಿ ನಡೆದಿದ್ದ ಶಿಯಾ ಧರ್ಮಗುರು ಮೊಹಮ್ಮದ್ ಬಕೀರ್ ಅಲ್-ಸದರ್ ಹತ್ಯೆಗೆ ಸಂಬಂಧಿಸಿದಂತೆ ಸದ್ದಾಂ ಹುಸೇನ್ ಆಡಳಿತ ಅವಧಿಯಲ್ಲಿದ್ದ ಉನ್ನತ ಭದ್ರತಾ ಅಧಿಕಾರಿಯನ್ನು ಇರಾಕ್‌ನಲ್ಲಿ ಗಲ್ಲಿಗೇರಿಸಲಾಗಿದೆ.
ಸದ್ದಾಂ ಆಡಳಿತದಲ್ಲಿ ಮೇಜರ್ ಜನರಲ್ ಆಗಿದ್ದ ಸಾದೌನ್ ಸಬ್ರಿ ಅಲ್-ಖೈಸಿಯನ್ನು ಕಳೆದ ವರ್ಷ ಬಂಧಿಸಲಾಗಿತ್ತು. ಮಾನವೀಯತೆ ವಿರುದ್ಧದ ಗಂಭೀರ ಅಪರಾಧಗಳಿಗಾಗಿ ಅವರನ್ನು ಗಲ್ಲಿಗೇರಿಸಲಾಗಿದೆ ಎಂದು ಇರಾಕ್‌ನ ರಾಷ್ಟ್ರೀಯ ಭದ್ರತಾ ಸಂಸ್ಥೆ ಹೇಳಿದೆ. ಆದರೆ, ಗಲ್ಲು ಶಿಕ್ಷೆ ಜಾರಿ ಮಾಡಿದ್ದು ಯಾವತ್ತು ಎನ್ನುವುದನ್ನು ಸಂಸ್ಥೆ ಬಹಿರಂಗಪಡಿಸಿಲ್ಲ.
ಅಲ್-ಸದರ್, ಇರಾಕ್ ಸರ್ಕಾರ ಮತ್ತು ಸದ್ದಾಂನ ಪ್ರಮುಖ ವಿಮರ್ಶಕರಾಗಿದ್ದರು. 1979ರಲ್ಲಿ ಇರಾನ್‌ನಲ್ಲಿ ನಡೆದ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾಕ್‌ನಲ್ಲಿ ಶಿಯಾ ನೇತೃತ್ವದ ದಂಗೆಗೆ ಅಲ್-ಸದರ್ ಕಾರಣರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.