ADVERTISEMENT

Video| ಭಾರತದ ರಾಜತಾಂತ್ರಿಕ ಅಧಿಕಾರಿಯ ಬೆನ್ನಟ್ಟಿದ ಪಾಕ್‌ ಗುಪ್ತಚರ ಸಿಬ್ಬಂದಿ

ಏಜೆನ್ಸೀಸ್
Published 4 ಜೂನ್ 2020, 16:42 IST
Last Updated 4 ಜೂನ್ 2020, 16:42 IST
ಗೌರವ್‌ ಅಹ್ಲುವಾಲಿಯಾ ಅವರ ಕಾರು ಹಿಂಬಲಿಸುತ್ತಿರುವ ಗುಪ್ತಚರ ಸಿಬ್ಬಂದಿ
ಗೌರವ್‌ ಅಹ್ಲುವಾಲಿಯಾ ಅವರ ಕಾರು ಹಿಂಬಲಿಸುತ್ತಿರುವ ಗುಪ್ತಚರ ಸಿಬ್ಬಂದಿ    

ಇಸ್ಲಾಮಾಬಾದ್‌: ಭಾರತದ ರಾಜತಾಂತ್ರಿಕ ಅಧಿಕಾರಿ ಗೌರವ್ ಅಹ್ಲುವಾಲಿಯಾ ಅವರ ಕಾರನ್ನು ಇಸ್ಲಾಮಾಬಾದ್‌ನಲ್ಲಿ ಪಾಕಿಸ್ತಾನದ ಗುಪ್ತಚರ ಇಲಾಖೆ (ಐಎಸ್‌ಐ) ಸದಸ್ಯರು ಹಿಂಬಾಲಿಸಿರುವ ಘಟನೆ ನಡೆದಿದೆ.

ಭಾರತದ ರಾಜತಾಂತ್ರಿಕ ಅಧಿಕಾರಗಳ ನಿವಾಸದ ಹೊರಗೆ ಹಾಗೂ ಸಂಚರಿಸುವ ಮಾರ್ಗದಲ್ಲಿ ಪಾಕಿಸ್ತಾನದ ಗುಪ್ತಚರ ಇಲಾಖೆ ತನ್ನ ಸಿಬ್ಬಂದಿಯನ್ನು ಕಾರು ಮತ್ತು ಬೈಕ್‌ಗಳಲ್ಲಿ ನಿಯೋಜಿಸುತ್ತಿದೆ. ಇದು ಅವರನ್ನು ಹೆದರಿಸುವ, ಕಿರುಕುಳ ನೀಡುವ ಭಾಗವಾಗಿ ನಡೆಯುತ್ತಿರುವ ಕೃತ್ಯಗಳು ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪಾಕಿಸ್ತಾನದ ಏಜೆನ್ಸಿಗಳು ನಿರಂತರವಾಗಿ ಕಿರುಕುಳ ನೀಡುತ್ತಿರುವುದನ್ನು ವಿರೋಧಿಸಿ ಪಾಕಿಸ್ತಾನದ ಭಾರತೀಯ ಹೈಕಮಿಷನ್ ಇಸ್ಲಾಮಾಬಾದ್‌ನ ವಿದೇಶಾಂಗ ಸಚಿವಾಲಯಕ್ಕೆ ಮಾರ್ಚ್‌ನಲ್ಲಿ ಪ್ರತಿಭಟನಾ ಟಿಪ್ಪಣಿಯನ್ನು ರವಾನಿಸಿತ್ತು.

ADVERTISEMENT

ಅಧಿಕಾರಿಗಳಿಗೆ ಕಿರುಕುಳ ನೀಡಿದ 13 ಪ್ರಸಂಗಗಳನ್ನು ಉಲ್ಲೇಖಿಸಿ ಭಾರತವು ಪಾಕಿಸ್ತಾನಕ್ಕೆ ಪತ್ರ ಬರೆದಿತ್ತು. ಅಲ್ಲದೆ, ಈ ಎಲ್ಲ ಪ್ರಕರಣಗಳ ತನಿಖೆಗೆ ಒತ್ತಾಯಿಸಿತ್ತು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.