ADVERTISEMENT

ಪಾಕ್ ರಾಯಭಾರಿ ಕಚೇರಿ ಮೇಲಿನ ದಾಳಿ ಹೊಣೆ ಹೊತ್ತ ಐಎಸ್‌ಐಎಸ್‌–ಕೆ

ಪಿಟಿಐ
Published 4 ಡಿಸೆಂಬರ್ 2022, 11:21 IST
Last Updated 4 ಡಿಸೆಂಬರ್ 2022, 11:21 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಇಸ್ಲಾಮಾಬಾದ್‌ :ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿ ಮೇಲೆ ಶುಕ್ರವಾರ ನಡೆದ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್‌ ಖೋರಾಸನ್ ಚಾಪ್ಟರ್‌ (ಐಎಸ್‌ಐಎಸ್‌–ಕೆ) ಭಾನುವಾರ ವಹಿಸಿಕೊಂಡಿದೆ. ದಾಳಿಯಲ್ಲಿ ರಾಯಭಾರಿ ಪ್ರಾಣಾಪಾಯದಿಂದ ಪಾರಾಗಿದ್ದು,ಭದ್ರತಾ ಸಿಬ್ಬಂದಿಯೊಬ್ಬರಿಗೆ ತೀವ್ರ ಗಾಯವಾಗಿತ್ತು. ಅವರನ್ನು ಹೆಲಿಕಾಪ್ಟರ್‌ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿತ್ತು.

'ನಮ್ಮ ಇಬ್ಬರು ಸದಸ್ಯರುಶುಕ್ರವಾರ ರಾಯಭಾರಿ ಕಚೇರಿಗೆ ಬಂದಿದ್ದ ರಾಯಭಾರಿ ಉಬೈದ್‌–ಉರ್‌–ರೆಹಮಾನ್ ನಿಜಾಮನಿ ಹಾಗೂ ಇಬ್ಬರು ಭದ್ರತಾ ಸಿಬ್ಬಂದಿ ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದ್ದರು. ಇದರಲ್ಲಿ ಒಬ್ಬ ಸಿಬ್ಬಂದಿಗೆ ಮಾತ್ರ ಗಂಭೀರ ಗಾಯಗಳಾಗಿವೆ' ಎಂದು ಐಎಸ್‌ಐಎಸ್‌–ಕೆ ತಿಳಿಸಿದೆ.

ದುಷ್ಕರ್ಮಿಗಳನ್ನು ತುರ್ತಾಗಿ ಬಂಧಿಸಿ ನ್ಯಾಯಾಂಗಕ್ಕೆ ತರಬೇಕು, ರಾಯಭಾರ ಕಚೇರಿ ಆವರಣದ ಭದ್ರತಾ ಉಲ್ಲಂಘನೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಬೇಕು ಮತ್ತು ರಾಜತಾಂತ್ರಿಕ ಆವರಣ, ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪಾಕಿಸ್ತಾನ ಒತ್ತಾಯಿಸಿದೆ.

ADVERTISEMENT

ಉಬೈದ್‌ ಅವರು ನವೆಂಬರ್ 4 ರಂದು ಮಾಜಿ ರಾಯಭಾರಿ ಮನ್ಸೂರ್ ಅಹ್ಮದ್ ಖಾನ್ ಅವರ ಬದಲಿಗೆ ಮಿಷನ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.