ಮಾಸ್ಕೋ: ‘ಭಾರತದ ಆಡಳಿತಾರೂಢ ಪಕ್ಷದ ನಾಯಕರೊಬ್ಬರನ್ನು ಹತ್ಯೆ ಮಾಡಲು ನಿಯೋಜಿತನಾಗಿದ್ದ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರನೊಬ್ಬನನ್ನು ಬಂಧಿಸಲಾಗಿದೆ’ ಎಂದು ರಷ್ಯಾ ಹೇಳಿದೆ.
ರಷ್ಯಾದ ಫೆಡರಲ್ ಸೆಕ್ಯೂರಿಟಿ ಸರ್ವೀಸಸ್ (ಎಫ್ಎಸ್ಬಿ) ಈ ಬಗ್ಗೆ ಮಾಹಿತಿ ನೀಡಿದೆ.ಈ ಬೆಳವಣಿಗೆಯನ್ನು ಟರ್ಕಿಯ ಸರ್ಕಾರಿ ಸುದ್ದಿ ಸಂಸ್ಥೆ ಟಿಎಎಸ್ಎಸ್ ಸಹ ದೃಢಪಡಿಸಿದೆ.
‘ಬಂಧಿತ ವ್ಯಕ್ತಿಯು ಮಧ್ಯ ಏಷ್ಯಾದ ದೇಶಕ್ಕೆ ಸೇರಿದವನಾಗಿದ್ದಾನೆ. ಪ್ರವಾದಿ ಮಹಮ್ಮದ್ ಅವರನ್ನು ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಈ ದಾಳಿಯನ್ನು ಯೋಜಿಸಲಾಗಿತ್ತು ಮತ್ತು ಆ ಹೇಳಿಕೆ ನೀಡಿದವರನ್ನುಆತ್ಮಾಹುತಿ ಬಾಂಬ್ ದಾಳಿಯ ಮೂಲಕ ಕೊಲ್ಲಲು ಯೋಜನೆ ರೂಪಿಸಿದ್ದಾಗಿ ಬಂಧಿತ ಉಗ್ರ ಒಪ್ಪಿಕೊಂಡಿದ್ದಾನೆ’ ಎಂದು ಎಫ್ಎಸ್ಬಿ ಮಾಹಿತಿ ನೀಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.