ADVERTISEMENT

ಗಾಜಾದ ಮೇಲೆ ಇಸ್ರೇಲ್‌ ದಾಳಿ: 30 ಪ್ಯಾಲೆಸ್ಟೀನಿಯನ್ನರ ಹತ್ಯೆ

ಪಿಟಿಐ
Published 31 ಜನವರಿ 2026, 15:57 IST
Last Updated 31 ಜನವರಿ 2026, 15:57 IST
ಗಾಜಾಪಟ್ಟಿಯ ಖಾನ್ ಯೂನಿಸ್‌ ನಗರದ ಮೇಲೆ ಇಸ್ರೇಲ್‌ ಶನಿವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಮೃತಪಟ್ಟವರ ಶವಗಳನ್ನು ಅಂತ್ಯಸಂಸ್ಕಾರಕ್ಕಾಗಿ ಕೊಂಡೊಯ್ದ ಪ್ಯಾಲೆಸ್ಟೀನಿಯನ್ನರು
ಎಎಫ್‌ಪಿ ಚಿತ್ರ
ಗಾಜಾಪಟ್ಟಿಯ ಖಾನ್ ಯೂನಿಸ್‌ ನಗರದ ಮೇಲೆ ಇಸ್ರೇಲ್‌ ಶನಿವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಮೃತಪಟ್ಟವರ ಶವಗಳನ್ನು ಅಂತ್ಯಸಂಸ್ಕಾರಕ್ಕಾಗಿ ಕೊಂಡೊಯ್ದ ಪ್ಯಾಲೆಸ್ಟೀನಿಯನ್ನರು ಎಎಫ್‌ಪಿ ಚಿತ್ರ   

ದಾರ್‌ ಅಲ್–ಬಲಾ: ಗಾಜಾದ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 30 ಮಂದಿ ಮೃತಪಟ್ಟಿದ್ದಾರೆ.

ಹಮಾಸ್‌– ಇಸ್ರೇಲ್‌ ನಡುವಿನ ಸಂಘರ್ಷಕ್ಕೆ ಅಂತ್ಯ ಹಾಡಲಿಕ್ಕಾಗಿಯೇ ಅಕ್ಟೋಬರ್‌ನಲ್ಲಿ ಏರ್ಪಟ್ಟ ಕದನ ವಿರಾಮದ ಬಳಿಕ, ಇಸ್ರೇಲ್ ನಡೆಸಿದ ಭೀಕರ ದಾಳಿ ಇದಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಕದನ ವಿರಾಮವು ಉಲ್ಲಂಘನೆ ಆಗುತ್ತಿದೆ ಎಂಬ ಆರೋಪ ಕೇಳಿ ಬಂದ ಮರುದಿನವೇ ಇಸ್ರೇಲ್‌, ಗಾಜಾ ಹಾಗೂ ಖಾನ್‌ ಯೂನಿಸ್‌ ನಗರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಗಾಜಾದ ನಗರ ಪೊಲೀಸ್ ಠಾಣೆಯೊಂದರ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಇಬ್ಬರು ಮಹಿಳೆಯರು, ಆರು ಮಕ್ಕಳು ಸೇರಿದಂತೆ ಕನಿಷ್ಠ 14 ಮಂದಿ ಗಾಯಗೊಂಡಿದ್ದಾರೆ ಎಂದು ಶಿಫಾ ಆಸ್ಪತ್ರೆಯ ನಿರ್ದೇಶಕ ಮೊಹಮ್ಮದ್‌ ಅಬು ಸೆಲ್ಮಿಯಾ ತಿಳಿಸಿದ್ದಾರೆ.

ADVERTISEMENT

ಇಸ್ರೇಲ್ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಹಮಾಸ್‌ ದೂರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.