
ಪಿಟಿಐ
ಜೆರುಸಲೇಂ: ಇಸ್ರೇಲ್ ಸರ್ಕಾರವು ಭಾರತಕ್ಕೆ ನೂತನ ರಾಯಭಾರಿಯಾಗಿ ಹಿರಿಯ ರಾಜತಾಂತ್ರಿಕ ಅಧಿಕಾರಿ ರುವೆನ್ ಅಜರ್ (56) ಅವರನ್ನು ಸೋಮವಾರ ನೇಮಕಗೊಳಿಸಿದೆ.
‘ಅಜರ್ ಈ ಹಿಂದೆ ಶ್ರೀಲಂಕಾ ಮತ್ತು ಭೂತಾನ್ ದೇಶಗಳಿಗೆ ರಾಯಭಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು’ ಎಂದು ಇಸ್ರೇಲ್ ವಿದೇಶಾಂಗ ಇಲಾಖೆ ತಿಳಿಸಿದೆ.
ಅಜರ್ ಅವರು ಪ್ರಸ್ತುತ ರೊಮಾನಿಯಾದಲ್ಲಿ ಇಸ್ರೇಲ್ ರಾಯಭಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ನವದೆಹಲಿಯಲ್ಲಿ ಕರ್ತವ್ಯಕ್ಕೆ ಹಾಜರಾಗುವ ದಿನಾಂಕ ತಿಳಿದುಬಂದಿಲ್ಲ. 2021ರಿಂದ ಇಸ್ರೇಲ್ ರಾಯಭಾರಿಯಾಗಿದ್ದ ನ್ವಾರ್ ಗಿಲೊನ್ ಅವರ ಸ್ಥಾನಕ್ಕೆ ಅಜರ್ ನೇಮಕಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.