ADVERTISEMENT

ಯುದ್ಧವಿರಾಮ: ಇಸ್ರೇಲ್ ತಲುಪಿದ ಹಮಾಸ್ ಬಿಡುಗಡೆ ಮಾಡಿದ ಮೂವರು ಒತ್ತೆಯಾಳುಗಳು

ಪಿಟಿಐ
Published 19 ಜನವರಿ 2025, 16:26 IST
Last Updated 19 ಜನವರಿ 2025, 16:26 IST
   

ಜೆರುಸಲೇಂ: ಇಸ್ರೇಲ್ ಮತ್ತು ಹಮಾಸ್ ಯುದ್ಧ ವಿರಾಮ ಒಪ್ಪಂದ ಫಲಪ್ರದವಾಗಿದ್ದು, ಹಮಾಸ್ ತಡವಾಗಿಯಾದರೂ ಇಂದು ಮೂವರು ಮಹಿಳಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದೆ.

ಬಿಡುಗಡೆಯಾದ ಮೂವರು ಒತ್ತೆಯಾಳುಗಳು ತನ್ನ ಸೈನಿಕರೊಂದಿಗೆ ದೇಶದ ಭೂಪ್ರದೇಶವನ್ನು ಪ್ರವೇಶಿಸಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ಭಾನುವಾರ ತಿಳಿಸಿದೆ.

‘ಸ್ವಲ್ಪ ಸಮಯದ ಹಿಂದೆ, ಬಿಡುಗಡೆಯಾದ ಒತ್ತೆಯಾಳುಗಳು ಐಡಿಎಫ್ (ಮಿಲಿಟರಿ) ಮತ್ತು ಐಎಸ್‌ಎ (ಭದ್ರತಾ ಸಂಸ್ಥೆ) ಪಡೆಗಳೊಂದಿಗೆ ಗಡಿಯನ್ನು ದಾಟಿ ಇಸ್ರೇಲ್‌ನ ಭೂಪ್ರದೇಶಕ್ಕೆ ಬಂದರು. ಬಿಡುಗಡೆಯಾದ ಒತ್ತೆಯಾಳುಗಳು ಪ್ರಸ್ತುತ ದಕ್ಷಿಣ ಇಸ್ರೇಲ್‌ನ ಆರಂಭಿಕ ಸ್ವಾಗತ ಕೇಂದ್ರಕ್ಕೆ ಹೋಗುತ್ತಿದ್ದಾರೆ. ಅಲ್ಲಿ ಅವರು ಪ್ರಾಥಮಿಕ ವೈದ್ಯಕೀಯ ಪರೀಕ್ಷೆಗೆ ಒಳಗಾಗಲಿದ್ದಾರೆ’ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ಒತ್ತೆಯಾಳುಗಳು ನಮ್ಮ ವಶದಲ್ಲಿದ್ದಾರೆ. ಅವರು ತಮ್ಮ ತಮ್ಮ ಮನೆಗೆ ತೆರಳುತ್ತಿದ್ದಾರೆ ಎಂದು ಮಿಲಿಟರಿ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಅವರು ದೂರದರ್ಶನದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಮ್ಮ ಹೃದಯಗಳು ಈಗ ಅಮಾನವೀಯ ಸ್ಥಿತಿಯಲ್ಲಿರುವ ಎಲ್ಲ ಒತ್ತೆಯಾಳುಗಳ ಜೊತೆಗಿವೆ. ಉಳಿದ ಒತ್ತೆಯಾಳುಗಳ ಮರಳುವಿಕೆಗಾಗಿ ನಾವು ಕಾಯುತ್ತಿದ್ದೇವೆ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.