ಗಾಜಾದಲ್ಲಿ ಇಸ್ರೇಲ್ ದಾಳಿ
- ರಾಯಿಟರ್ಸ್ ಚಿತ್ರ
ನ್ಯೂಯಾರ್ಕ್/ಜೆರುಸೆಲೇಂ: ತನ್ನ ಸಮಾಧಿಯನ್ನು ತಾನೇ ತೋಡಿಕೊಳ್ಳುತ್ತಿರುವ, ಆಹಾರವಿಲ್ಲದೇ ನಿತ್ರಾಣಗೊಂಡಿರುವ ಹಮಾಸ್‌ನ ಒತ್ತೆಯಾಳುವಾದ ಇಸ್ರೇಲ್‌ನ ಇವ್ತಾರ್ ಡೇವಿಡ್ ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎನ್ನುವ ಆಗ್ರಹವನ್ನು ಇಸ್ರೇಲ್ ಮುಂದಿಟ್ಟಿದೆ. ಇದಕ್ಕಾಗಿ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಸಭೆಯನ್ನು ಮಂಗಳವಾರ ಕರೆದಿತ್ತು.
ಸಮಾಧಿ ತೋಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಆದರೆ, ಗಾಜಾದಲ್ಲಿ 20 ಲಕ್ಷಕ್ಕೂ ಹೆಚ್ಚು ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಪ್ಯಾಲೆಸ್ಟೀನ್ ಜನರು ಮಾತ್ರವಲ್ಲ ವಿಶ್ವ ಸಂಸ್ಥೆಯ ಸದಸ್ಯ ದೇಶಗಳೂ ಇಸ್ರೇಲ್ ಸರ್ಕಾರ ಮತ್ತು ಸೇನೆಯನ್ನು ದೂಷಿಸಿವೆ. ಎರಡು ತಿಂಗಳಿಗೂ ಹೆಚ್ಚು ದಿನಗಳಿಂದ ಆಹಾರವು ಗಾಜಾವನ್ನು ಪ್ರವೇಶಿಸದಂತೆ ಇಸ್ರೇಲ್ ತಡೆದಿತ್ತು. ಈ ಕ್ರಮದಿಂದ ಗಾಜಾದಲ್ಲಿನ ಸುಮಾರು 100 ಜನರು ಹಸಿವಿನಿಂದ ಮೃತಪಟ್ಟಿದ್ದಾರೆ.
‘ಅಂತರರಾಷ್ಟ್ರೀಯ ಮಾಧ್ಯಮ, ರಷ್ಯಾ ಮತ್ತು ಮಂಡಳಿಯ ಇತರ ದೇಶಗಳು ‘ಹತ್ತಾರು ಸುಳ್ಳು’ಗಳನ್ನು ಹೇಳುತ್ತಿವೆ. ದೊಡ್ಡ ಪ್ರಮಾಣದ ನೆರವು ಸೇವೆಗಳು ಗಾಜಾದ ಒಳಗೆ ಹೋಗುವಂತೆ ನಾವು ಅನುವು ಮಾಡಿಕೊಟ್ಟಿದ್ದೇವೆ. ಆದರೆ, ಹಮಾಸ್ ಸಂಘಟನೆಯು ಈ ಆಹಾರ ಮತ್ತು ಇತರೆ ಅಗತ್ಯ ವಸ್ತುಗಳನ್ನು ಲೂಟಿ ಮಾಡಿ, ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದೆ’ ಎಂದು ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯನ್ ಸಾರ್ ಹೇಳಿದರು. ‘ಈ ವಾದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ’ ಎಂದು ವಿಶ್ವಸಂಸ್ಥೆ ವಕ್ತಾರ ಸ್ಟೀಫೆನಿ ದುಜಾರಕ್ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.